×
Ad

ಮಣಿಪಾಲ: ರೈಲಿನಲ್ಲಿ ಚಿನ್ನಾಭರಣ ಕಳವು

Update: 2016-07-23 23:58 IST

ಮಣಿಪಾಲ, ಜು.23: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮತ್ತು ಬರುವ ಬಿಸ್ಕತ್ ನೀಡಿ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ಇವರ್ತ್ತೂರು ಗ್ರಾಮದ ಸುಂದರ ಶೆಟ್ಟಿ ಎಂಬವರ ಮಗ ಸುನೀಲ್ ಶೆಟ್ಟಿ (29) ಎಂಬವರು ಜು.22ರಂದು ಅಪರಾಹ್ನ 3:30ಕ್ಕೆ ಮುಂಬೈನ ಥಾಣೆ ರೈಲು ನಿಲ್ದಾಣದಿಂದ ಮತ್ಸಗಂಧ ರೈಲಿನಲ್ಲಿ ಉಡುಪಿಗೆ ಬರುತ್ತಿರುವಾಗ ಮಹಾರಾಷ್ಟ್ರದ ಚಿಪ್ಲೊನ್ ರೈಲು ನಿಲ್ದಾಣದಲ್ಲಿ ರಾತ್ರಿ 9 ಗಂಟೆಗೆ ಓರ್ವ ಅಪರಿಚಿತ ವ್ಯಕ್ತಿಯು ಇವರಿಗೆ ತಿನ್ನಲು ಬಿಸ್ಕತ್ ನೀಡಿದ್ದ ಎನ್ನಲಾಗಿದೆ.
 ಅದನ್ನು ತಿಂದ ಕೂಡಲೇ ಸುನೀಲ್ ನಿದ್ರೆ ಮಾಡಿದ್ದು, ಜು.23ರಂದು ಬೆಳಗ್ಗೆ 8 ಗಂಟೆಗೆ ರೈಲು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ತಲುಪಿದಾಗ ಇವರನ್ನು ಬೇರೆ ಯಾರೋ ಎಬ್ಬಿಸಿದರು. ಎಚ್ಚರಗೊಂಡು ನೋಡಿದಾಗ ಸುನೀಲ್ ಶೆಟ್ಟಿಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್, ಎರಡು ಕೈ ಬೆರಳುಗಳಲ್ಲಿದ್ದ 5 ಚಿನ್ನದ ಉಂಗುರಗಳು, ಪರ್ಸ್‌ನಲ್ಲಿದ್ದ 5,000 ರೂ. ನಗದು, ಎರಡು ಎಟಿಎಂ ಕಾರ್ಡ್, ಬ್ಯಾಗ್ ಹಾಗೂ ಅದರಲ್ಲಿದ್ದ ಚಿನ್ನದ ರೋಪ್ ಚೈನ್, ಒಂದು ಚಿನ್ನದ ಬ್ರಾಸ್‌ಲೈಟ್, ಕಿಸೆಯಲ್ಲಿದ್ದ 2 ಮೊಬೈಲ್ ಪೋನ್ ಕಳವಾಗಿರುವುದು ಕಂಡು ಬಂದಿದೆ. ಕಳವಾದ 80 ಗ್ರಾಂ ಚಿನ್ನಾಭರಣದ ಮೌಲ್ಯ 1,60,000 ರೂ. ಆಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News