×
Ad

ಕಳಪೆ ಕಬಾಲಿ

Update: 2016-07-24 00:07 IST

 ಜನಿಕಾಂತ್ ವಿಷಯದಲ್ಲಿ ಪ್ರತಿಬಾರಿಯೂ ನಿರೀಕ್ಷೆಗಳು ಹುಸಿಯಾಗುತ್ತಿರುವುದು ಅವರ ವರ್ಚಸ್ಸಿಗೆ ಖಂಡಿತವಾಗಿಯೂ ಒಳ್ಳೆಯದಲ್ಲ. ಒಂದು ಕಾಲದಲ್ಲಿ ತನ್ನದೇ ಸ್ಟೈಲ್‌ಗಳ ನಡುವೆಯೂ ಅತ್ಯುತ್ತಮಕಥಾ ವಸ್ತುವುಳ್ಳ ಸಿನೆಮಾಗಳನ್ನು ಮಾಡಿದ ಹೆಗ್ಗಳಿಕೆ ರಜನಿಕಾಂತ್ ಅವರಿಗಿತ್ತು. ಅತ್ಯುತ್ತಮ ಕಥಾವಸ್ತು ಮತ್ತು ಬಿಗಿ ನಿರ್ದೇಶನವೇ ರಜನಿಕಾಂತ್‌ರನ್ನು ಮೇಲೆತ್ತಿರುವುದು ಹೊರತು, ಅವರ ಮ್ಯಾನರಿ ಸಂಗಳು, ಸೂಪರ್ ಸ್ಟಾರ್ ಹೆಗ್ಗಳಿಕೆಗಳಲ್ಲ. ರಜನಿಕಾಂತ್‌ಗೆ ಅವರದೇ ಆದ ಅಭಿಮಾನಿಗಳು ಇದ್ದಾರಾದರೂ, ಅವರಿಂದಲೇ ಒಂದು ಸಿನೆಮಾ ಯಶಸ್ವಿಯಾಗಲು ಸಾಧ್ಯವಿಲ್ಲ. ಇವರೆಡರ ನಡುವೆ ಹೊಂದಾಣಿಕೆ ಮಾಡುವುದು ರಜನಿಕಾಂತ್ ಮತ್ತು ಅವರ ಚಿತ್ರಗಳ ನಿರ್ದೇಶಕರ ಹೊಣೆಗಾರಿಕೆಯಾಗಿದೆ. ಅಂತಹ ಹೊಣೆಗಾರಿಕೆಯಲ್ಲಿ ವಿಫಲವಾಗಿ, ಚಿತ್ರ ಸಂಪೂರ್ಣ ರಜನೀಮಯವಾಗಿ ಬಿಟ್ಟರೆ ಏನಾ ಗುತ್ತದೆ ಎನ್ನುವುದಕ್ಕೆ ಅವರದೇ ಇತ್ತೀಚಿನ ಸೋತ ಚಿತ್ರಗಳು ಸಾಕ್ಷಿ. ಒಂದು ಕಾಲದಲ್ಲಿ ಅರುಣಾಚಲಂ, ಪಡೆಯಪ್ಪ, ಭಾಷಾ ಮೊದಲಾದ ಚಿತ್ರಗಳಲ್ಲಿದ್ದ ಹೊಂದಾಣಿಕೆ ಈಗೀಗ ಅವರ ಚಿತ್ರಗಳಲ್ಲಿ ಕಾಣುತ್ತಿಲ್ಲ. ತುಂಬಾ ದಿನಗಳ ಬಳಿಕ ಎಂದಿರನ್ ಚಿತ್ರದಲ್ಲಿ ಅದನ್ನು ಸಾಧಿಸಿ ದ್ದರಾದರೂ, ಕೋಚಾಡಿಯನ್ ಮತ್ತು ಲಿಂಗಾ ಚಿತ್ರದಲ್ಲಿ ಅದನ್ನು ಸಂಪೂರ್ಣ ಕಳೆದು ಕೊಂಡು, ತನ್ನನ್ನು ತಾನೇ ವಿಜೃಂಭಿಸಲು ಹೋಗಿ ಎಡವಿದರು.

ಇದೀಗ ಕಬಾಲಿ ಬಂದಾಗ ಅವರು ಪ್ರೇಕ್ಷಕರನ್ನು ಅರ್ಥ ಮಾಡಿಕೊಂಡು, ತನ್ನನ್ನು ತಿದ್ದಿ ಕೊಂಡಿರಬಹುದು ಎಂದು ಬಹುಜನರು ನಿರೀಕ್ಷಿಸಿ ದ್ದರು. ಒಂದು ಉತ್ತಮ ಚಿತ್ರವಾಗಬೇಕಾದ ಕತೆಯನ್ನು ಹೊಂದಿದ್ದರೂ, ನೀರಸ ನಿರೂಪಣೆಯ ಮೂಲಕ, ಸೂಪರ್‌ಸ್ಟಾರ್‌ನ ವೈಭವೀಕರಣದ ಮೂಲಕ ಕಬಾಲಿ ನಮ್ಮನ್ನು ನಿರಾಸೆಗೆ ತಳ್ಳುತ್ತದೆ. ಮಾಧ್ಯಮಗಳ ಮೂಲಕ ರಜನಿಕಾಂತ್ ಇಂತಹ ವಂಚನೆಗಳನ್ನು ಪದೇ ಪದೇ ಮಾಡುವುದರಿಂದ, ಅವರ ವರ್ಚಸ್ಸಿಗೆ ಅದು ತೀವ್ರ ಧಕ್ಕೆ ತರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದೊಂದು ದಿನ ಸೂಪರ್ ಸ್ಟಾರ್ ರಜನಿಕಾಂತ್ ಬದಿಗೆ ಸರಿದು, ಅವರ ಹೆಸರಲ್ಲಿ ರುವ ಜೋಕುಗಳು ಪ್ರಾಧಾನ್ಯತೆ ಯನ್ನು ಪಡೆಯುವ ಸಾಧ್ಯತೆಗ ಳಿವೆ. ರಜನಿಕಾಂತ್ ಸಿನೆಮಾವನ್ನು ಜನರು ಹಾಸ್ಯ ಸಿನೆಮಾವೆಂದು ನೋಡಲು ಧಾವಿಸುವ ದಿನಗಳೂ ಬರಬಹುದು. ಕಬಾಲಿ ಚಿತ್ರ ರಜನಿ ಅಭಿಮಾನಿಗಳಿಂದಾಗಿ ಏನಾದರೂ ಸೂಪರ್ ಹಿಟ್ ಆದರೆ, ಅವರ ಅಭಿಮಾ ನಿಗಳ ಮಟ್ಟವನ್ನು ಅದು ಎತ್ತಿ ತೋರಿಸಬಹುದೇ ಹೊರತು, ಚಿತ್ರದ ಮಟ್ಟವನ್ನೋ, ರಜನಿಯ ಮಟ್ಟ ವನ್ನೋ ಅದು ಪ್ರತಿನಿಧಿಸಲಾರದು. ಕಬಾಲಿ ತನ್ನ ವಿಭಿನ ಹೆಸರಿನಿಂದ ಗಮನ ಸೆಳೆದಿತ್ತು. ಮುಖ್ಯವಾಗಿ ಮಲೇಶ್ಯಾದ ತಮಿಳು ಕಾರ್ಮಿಕರ ಬದುಕಿನ ಬಗ್ಗೆ ಇದು ಗಮನ ಸೆಳೆಯುತ್ತದೆ ಎಂಬ ವದಂತಿಯೂ ಹರಡಿತ್ತು. ಆದರೆ ಅಂತಿಮವಾಗಿ ಇವೆಲ್ಲದರಿಂದ ಮುಕ್ತವಾದ ಕಬಾಲಿ ತಾನು ಎಂದಿನ ರಜನಿಕಾಂತ್ ಎನ್ನುವುದನ್ನು ಘೋಷಿಸಿಕೊಳ್ಳುತ್ತದೆ. ಕಬಾಲಿ ಚಿತ್ರದಲ್ಲಿ ರಜನಿಕಾಂತ್ ಕೌಲಾಲಂಪು ರದ ಜೈಲಿನಿಂದ 25 ವರ್ಷಗಳ ನಂತರ ಬಿಡುಗಡೆ ಯಾಗುವ ದೊಡ್ಡ ಗ್ಯಾಂಗ್ ಸ್ಟರ್ ಆಗಿರುತ್ತಾರೆ. ಚಿತ್ರ ಮುಂದುವರಿಯುತ್ತಾ ಹೋದಂತೆ ಕಬಾಲಿ ಎಲ್ಲಾ ಗ್ಯಾಂಗ್‌ಸ್ಟರ್ ಗಳಂತಲ್ಲ ಎಂದು ತಿಳಿಯುತ್ತದೆ. ಗ್ಯಾಂಗ್ 43 (ಆತನ ಎದುರಾಳಿಗಳು) ಸದಸ್ಯರಂತೆ ಕಬಾಲಿ ಡ್ರಗ್ಸ್ ಹಾಗೂ ಮಹಿಳೆಯರ ಕಳ್ಳಸಾಗಣೆ ಯಲ್ಲಿ ತೊಡಗುವುದಿಲ್ಲ. ಹೆಚ್ಚಿನ ಭಾರತೀಯ ಸಿನೆಮಾಗಳಂತೆ ಈ ಹೀರೋ ಬಂದೂಕು ಹಿಡಿದು ಕೊಂಡಿರುವ ಸನ್ಯಾಸಿಯಂತೆ.

ಆತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜೈಲಿನ ಇತರ ಕೈದಿಗಳು ಭಾರೀ ಕರತಾಡನ ಮಾಡುತ್ತಾರೆ. ಅಮಲು ಪದಾರ್ಥ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವ ಫ್ರೀಲೈಪ್ ಪೌಂಡೇಶನ್ ಎಂಬ ಸಂಸ್ಥೆಯನ್ನು ಆತ ಪೋಷಿಸುತ್ತಾನೆ. ಜೈಲಿನಿಂದ ಹೊರ ಬಂದು ಐದು ನಿಮಿಷಗಳಾಗುವಷ್ಟರಲ್ಲಿ ಆತ ತನ್ನ ವೈರಿಗಳ ಮನೆಗೆ ನುಗ್ಗಿ ಎಲ್ಲರನ್ನೂ ಸದೆಬಡಿದು ತನ್ನ ಆಗಮನವನ್ನು ಘೋಷಿಸುತ್ತಾನೆ. ನಂತರ ತನ್ನ ಕಾರನ್ನು ತನ್ನ ವೈರಿ ಗ್ಯಾಂಗಿನ ಸದಸ್ಯನೊಬ್ಬನ ಮೇಲೆ ಹಾಯಿಸುತ್ತಾನೆ. ಯಾರೂ ಇಂತಹ ದೃಶ್ಯಗಳ ಬಗ್ಗೆ ಪ್ರಶ್ನಿಸುವುದಿಲ್ಲ. ಕಬಾಲಿಯಲ್ಲಿ ಗಮನಿಸತಕ್ಕ ಒಂದು ಅಂಶವೆಂದರೆ ಚಿತ್ರದಲ್ಲಿ ಹಾಸ್ಯ ಸಂಪೂರ್ಣ ಕಣ್ಮರೆಯಾಗಿದ್ದು ಚಿತ್ರವೇ ಹಾಸ್ಯಾಸ್ಪದ ಎನ್ನಿಸಿ, ಪ್ರೇಕ್ಷಕ ಹತಾಶೆಯ ನಗು ನಗಬೇಕಾಗುತ್ತದೆ.

ಚಿತ್ರದ ಒಂದು ದೃಶ್ಯದಲ್ಲಿ ಫ್ರೀ ಲೈಪ್ ಪೌಂಡೇಶನ್ ನ ಒಬ್ಬ ಯುವತಿ ಕಬಾಲಿಯನ್ನು ‘ಪಾಪಾ’ ಎಂದುಕರೆದಾಗ ಸ್ವಲ್ಪ ಮಟ್ಟಿನ ಆಭಾಸವಾಗುತ್ತದೆ. ಕಾರಣ ಯಾವ ಚಿತ್ರದಲ್ಲೂ ರಜನಿಕಾಂತ್ ತನ್ನ ವಯಸ್ಸಿಗೆ ತಕ್ಕ ಪಾತ್ರ ಮಾಡಿರಲೇ ಇಲ್ಲ. ಆದರೆ ಕಬಾಲಿ ಅದಕ್ಕೆ ಅಪವಾದವಾಗಿದೆ. ಹಿಂದಿಯಲ್ಲಿ ಡಬ್ ಮಾಡಲಾದ ಡೈಲಾಗ್‌ಗಳು ಕೂಡ ನಿರೀಕ್ಷಿತ ಗುಣಮಟ್ಟದಲ್ಲಿಲ್ಲ.

ಚಿತ್ರ ಹೀಗೆ ಮುಂದಕ್ಕೆ ಸಾಗುತ್ತಿದ್ದಂತೆರಜನಿಕಾಂತ್ ಹಾಗೂ ರಾಧಿಕಾ ಆಪ್ಟೆ ಅಭಿನಯ ಸಾಧಾರಣವಾಗಿದೆಯೆಂದೆನಿಸಿ ದರೆ, ಉಳಿದ ನಟರ ಅಭಿನಯ ತೀರಾ ಸಪ್ಪೆಯೆನಿಸುತ್ತದೆ. ಕಬಾಲಿ ಒಂದು ವಸ್ತು ನಿಷ್ಠ ಚಿತ್ರವಾಗಿದ್ದರೆ ಅದನ್ನೊಪ್ಪಬಹು ದಿತ್ತೋ ಏನೋ ಆದರೆ ಇಲ್ಲಿ ರಜನಿ ಕಾಂತ್ ತನ್ನ ಹಳೆಯ ಟ್ರಿಕ್‌ಗಳನ್ನು ನಡೆಸಿಪ್ರೇಕ್ಷಕರನ್ನು ಸೆಳೆಯಲು ಯತ್ನಿಸಿದ್ದರೂ ಅವರ ಈ ಟ್ರಿಕ್‌ಗಳು ಕೆಲಸ ಮಾಡಿಲ್ಲ, ಮೇಲಾಗಿ ಚಿತ್ರ ಸಂಪೂ ರ್ಣವಾಗಿ ಮಕ್ಕಳಾಟಿಕೆಯಂತಿದೆ. ಚಿತ್ರದ ಎಲ್ಲಾ ದೃಶ್ಯ ಗಳೂ 12 ರ ಹರೆಯದ ಮಕ್ಕಳ ಕಲ್ಪನಾ ಲಹರಿ ಯಂತಿವೆ. ಆದರೂ ಇಂತಹ ಒಂದು ಚಿತ್ರ ರಜನಿ ಕಾಂತ್ ಅಭಿಮಾನಿಗಳಲ್ಲಿ ಮೂಡಿಸಿದ ಅತ್ಯುತ್ಸಾಹ ನೋಡಿ ಆಶ್ಚರ್ಯವಾ ಗುತ್ತದೆ. ಅದೇ ಸಮಯ ಆಶ್ಚರ್ಯವಾಗುತ್ತದೆ ಎಂದು ಹೇಳುವುದು ಕೂಡ ತಪ್ಪಾಗುತ್ತದೆ. ಕಾರಣ ನಮ್ಮ ಸೂಪರ್ ಸ್ಟಾರ್ ಗಳನ್ನು ನಾವು ಪ್ರಶ್ನಿಸುವುದನ್ನು ನಿಲ್ಲಿಸಿರುವುದರಿಂದ ಅದಕ್ಕೆ ತಕ್ಕ ಬೆಲೆಯನ್ನು ನಾವು ತೆರಲೇಬೇಕಾಗುತ್ತದೆ.

‘‘ಒಂದು ಉತ್ಕೃಷ್ಟ ಚಿತ್ರದಲ್ಲಿ ಮೂರು ಉತ್ತಮ ದೃಶ್ಯಗಳು ಇರುತ್ತವೆ ಹಾಗೂ ಯಾವುದೇ ಕೆಟ್ಟ ದೃಶ್ಯಗಳಿ ರುವುದಿಲ್ಲ’’ ಎಂದು ಅಮೆರಿಕದ ಚಿತ್ರ ನಿರ್ಮಾತೃ ಹೌವಾರ್ಡ್ ಹಾಕ್ಸ್ ಹೇಳಿದ್ದರು. ಆದರೆ ಒಂದೂ ಉತ್ತಮ ದೃಶ್ಯವಿಲ್ಲದೆ ಡಜನ್ ಗಟ್ಟಲೆ ಕೆಟ್ಟ ದೃಶ್ಯಗಳಿ ರುವ ಚಿತ್ರವನ್ನು ಏನೆನ್ನಬೇಕೋ ತಿಳಿಯದು. ಒಟ್ಟಿನಲ್ಲಿ ಕಬಾಲಿಗೆ ಅತ್ಯಧಿಕ ಪ್ರಚಾರಕೊಟ್ಟು ಪ್ರೇಕ್ಷಕರ ತಲೆಗೆ ಕಟ್ಟಿದ ಮಾಧ್ಯಮಗಳೇ ಚಿತ್ರೋದ್ಯಮದ ನಿಜವಾದ ವಿಲನ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News