ನಯನತಾರಾ ‘TOXIC’ ಲುಕ್ ಬಿಡುಗಡೆ; ಯುಗಾದಿ ಹಬ್ಬಕ್ಕೆ ತೆರೆ ಮೇಲೆ ದೊಡ್ಡ ಸಿನಿಮಾಗಳ ಅಬ್ಬರ
Photo Credit : @NayantharaU
ಮಾರ್ಚ್ 19ರಂದು ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ‘ಟಾಕ್ಸಿಕ್’ಗೆ ಸ್ಪರ್ಧೆ ನೀಡಲು ಹಿಂದಿಯಲ್ಲಿ ಯಶಸ್ಸು ಕಂಡ ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಬಿಡುಗಡೆಯಾಗುತ್ತಿದೆ.
ಖ್ಯಾತ ನಟ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಮತ್ತೆ ಸುದ್ದಿಯಾಗಿದೆ. ಈ ಬಾರಿ ಸಿನಿಮಾದ ಮತ್ತೊಬ್ಬ ನಟಿ ‘ನಯನತಾರ’ ಅವರ ಗಂಗಾ ಪಾತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಾರ್ಚ್ 19ರಂದು ತೆರೆಗೆ ಬರಲು ಸಿದ್ಧವಾಗುತ್ತಿರುವ ‘ಟಾಕ್ಸಿಕ್’ ಸಿನಿಮಾ ಈ ಮೊದಲು ಯಶ್, ಕಿಯಾರಾ ಆಡ್ವಾಣಿ, ಹುಮಾ ಖುರೇಶಿ ಮೊದಲಾದ ನಟರ ಪಾತ್ರ ಪರಿಚಯ ಮಾಡಿತ್ತು.
ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಯನತಾರಾ ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಅವರು ಈ ಮೊದಲು ಉಪೇಂದ್ರ ಅವರ ‘ಸೂಪರ್’ ಸಿನಿಮಾದಲ್ಲಿ ನಟಿಸಿದ್ದರು. ‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರ ತಂಡ ಹೇಳಿದೆ. ಪೋಸ್ಟರ್ ನಲ್ಲಿ ನಯನತಾರಾ ಗನ್ ಹಿಡಿದು ಪೋಸ್ ನೀಡಿದ್ದಾರೆ. ಅವರ ಈ ಮಾಸ್ ಲುಕ್ ಅಭಿಮಾನಿಗಳ ನಡುವೆ ಚರ್ಚೆಗೆ ಗ್ರಾಸವಾಗಿದೆ.
ಯಶ್ ಮತ್ತು ಗೀತು ಮೋಹನ್ದಾಸ್ ಚಿತ್ರಕತೆ ಸಿದ್ಧಪಡಿಸಿದ್ದಾರೆ. ಗೀತು ಮೋಹನ್ದಾಸ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜನವರಿ 8 ನಟ ಯಶ್ ಅವರ ಜನ್ಮದಿನ. ಅಂದು ಚಿತ್ರದ ಮೊದಲ ಟೀಸರ್ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಸಿನಿಮಾದ ಎಲ್ಲಾ ಪಾತ್ರಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.
ನಯನತಾರಾ ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಶೂಟ್ ಮಾಡಿದ್ದರು. ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅವರ ಪಾತ್ರವನ್ನು ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿ ಗಂಗಾ ಹೆಸರಿನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್ ನಲ್ಲಿ ಕಂಡುಬಂದಿರುವ ಪ್ರಕಾರ ಅರಮನೆಯ ರೀತಿಯ ಸೆಟ್ ನಲ್ಲಿ ನಯನತಾರಾ ಎಂಟ್ರಿ ಕೊಡುತ್ತಿದ್ದಾರೆ. ಹಿಂಭಾಗದಲ್ಲಿ ವಿದೇಶಿಗರು ಕಾವಲು ಕಾಯಲು ನಿಂತಿದ್ದಾರೆ. ನಯನತಾರಾ ಕೈಯಲ್ಲಿ ಶಾಟ್ ಗನ್ ಇದೆ. ನಯನತಾರಾ ಲುಕ್ ಅನೇಕರಿಗೆ ಇಷ್ಟ ಆಗಿದೆ.
ಮಾರ್ಚ್ 19ರಂದು ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಿಂದಿಯಲ್ಲಿ ಯಶಸ್ಸು ಕಂಡ ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಮಾರ್ಚ್ 19ರಂದೇ ಬಿಡುಗಡೆಯಾಗುತ್ತಿದೆ. ಹೀಗಾಗಿ ಅದೃಷ್ಟ ಯಾರ ಕಡೆಗೆ ತಿರುಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.