×
Ad

ಕೃಷ್ಣಾಪುರ: ಸರಕಾರಿ ಕಾಲೇಜಿನ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ

Update: 2016-07-24 17:09 IST

ಸುರತ್ಕಲ್, ಜು.24: ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರು ತಮ್ಮ ವೃತ್ತಿಜೀವನದುದ್ದಕ್ಕೂ ತ್ಯಾಗ, ಆದರ್ಶದೊಂದಿಗೆ ಜ್ಞಾನವನ್ನು ನೀಡುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬಲ್ಲರು. ಅಂತಹ ಆದರ್ಶ ವ್ಯಕ್ತಿತ್ವ ಹೊಂದಿರುವ ಉಪನ್ಯಾಸಕರು ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಅವರನ್ನು ಗೌರವಿಸುತ್ತಿರುವುದಕ್ಕೆ ಹೆಮ್ಮೆಯೆನಿಸುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊಯ್ದೀನ್ ಬಾವ ಹೇಳಿದ್ದಾರೆ.

ಕೃಷ್ಣಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅರ್ಥಶಾಸ್ತ್ರ ಉಪನ್ಯಾಸಕ ಮಧುಸೂದನ್ ರಾವ್ ಹಾಗೂ ಇತಿಹಾಸ ಉಪನ್ಯಾಸಕಿ ಕೃಪಾಲನಿ ಪಿ. ಯವರನ್ನು ಕಾಲೇಜು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷ ಹಾಜಿ ಬಿ.ಎಂ. ಮಮ್ತಾಝ್ ಅಲಿ, ಮುಹಮ್ಮದ್ ಇಸ್ಮಾಯೀಲ್ ಎನ್.ಜಿ.ಸಿ. ಅಲ್ ಜುಬೈಲ್, ಮುಹಮ್ಮದ್ ಮುಬೀನ್ ಅಲ್ ಜುಬೈಲ್, ಮನಪಾ ಸದಸ್ಯ ಅಯಾಝ್, ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಇಫ್ತಿಕಾರ್ ಅಹ್ಮದ್, ಸಂಚಾಲಕ ಅಡ್ವೊಕೇಟ್ ಮುಹಮ್ಮದ್ ಇಸ್ಮಾಯೀಲ್, ಉಸ್ಮಾನ್ ಪ್ಯಾರಡೈಸ್, ಅಬೂಬಕರ್ ಟಿ.ಎಂ., ಅಝೀಝ್ ಬೈಕಂಪಾಡಿ, ಮಾಜಿ ಮೇಯರ್ ಗುಲ್ಝಾರ್ ಬಾನು, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಮೀರ್, ಉದ್ಯಮಿ ಹಕೀಂ ಫಾಲ್ಕನ್, ಉದ್ಯಮಿ ಅಜ್‌ಮೀರ್ ಖಾದರ್, ಜಾನಕಿ ಕನ್‌ಸ್ಟ್ರಕ್ಷನ್‌ನ ಮಾಲಕ ಧರ್ಮೇಂದ್ರ ಭಾಗವಹಿಸಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಾಜಿ. ಬಿಎ.ಎಂ. ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯೆ ಶಶಿ.ಎನ್., ಹಿರಿಯ ಉಪನ್ಯಾಸಕರಾದ ವಿಠಲ ಎಂ., ಪ್ರೌಢಶಾಲಾ ಉಪಪ್ರಾಚಾರ್ಯ ಬಾಬು ಪಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶರೀಫ್, ಅಬ್ದುಲ್ ಖಾದರ್ ಮುಂಬೈ, ನಿರಂಜನ್, ಅಬೂಬಕರ್ ಬದ್ರುಲ್ ಹುದಾ, ಶಿಕ್ಷಕ ರಕ್ಷಕ ಸಮಿತಿಯ ಸದಸ್ಯ ರಫೀಕ್, ಕೆ. ಹಂಝ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದುರ್ಗಾಪ್ರಸಾದ್ ‘ಹದಿಹರೆಯದ ಮನಸ್ಸುಗಳು- ಸಮಸ್ಯೆ ಮತ್ತು ಪರಿಹಾರ’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಇಫ್ತಿಕಾರ್ ಅಹ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ವೀರೇಶ್ ಬೇಕಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News