ಸುಳ್ಯ: ಪಿಕಪ್-ಕಾರು ಮಧ್ಯೆ ಢಿಕ್ಕಿ
Update: 2016-07-24 19:10 IST
ಸುಳ್ಯ, ಜು.24: ಸುಳ್ಯದಿಂದ ಕಾಸರಗೋಡು ಕಡೆಗೆ ಬಾಳೆಗೊನೆ ತುಂಬಿಸಿಕೊಂಡು ಹೋಗುತ್ತಿದ್ದ ಪಿಕಪ್‌ಗೆ ಮುಡೂರು ಬಳಿ ಕಾರೊಂದು ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಸುಳ್ಯದ ಎ.ಕೆ.ಬಿ. ಬನಾನ ಸಂಸ್ಥೆಗೆ ಸೇರಿದ ಪಿಕಪ್ ವಾಹನ ಸುಳ್ಯದಿಂದ ಬಾಳೆಗೊನೆ ತುಂಬಿಕೊಂಡು ಕಾಸರಗೋಡು ಕಡೆಗೆ ಹೋಗುತ್ತಿದ್ದ ಸಂದಭರ್ದಲ್ಲಿ ಕಾಸರಗೋಡು ಕಡೆಯಿಂದ ಬರುತ್ತಿದ್ದ ಸ್ವಿಫ್ ಕಾರು ಮುಡೂರು ಬಳಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳು ಜಖಂಗೊಂಡಿದೆ.
ಚಾಲಕರು ಯಾವುದೇ ಪ್ರಾಣಪಾಯವಿಲ್ಲದೇ ಪಾರಾಗಿದ್ದಾರೆ.