×
Ad

ಮಂಗಳವಾರದಿಂದ ಟ್ಯಾಕ್ಸಿ ಮುಷ್ಕರ

Update: 2016-07-24 23:52 IST

ಮುಂಬೈ, ಜು.24: ಓಲಾ ಹಾಗೂ ಉಬೆರ್‌ನಂಥ ಸಮುದಾಯದ ವಿರುದ್ಧ ಟ್ಯಾಕ್ಸಿ ಚಾಲಕರು ಮುಂದಿನ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ಮಹಾನಗರದಲ್ಲಿ ಟ್ಯಾಕ್ಸಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಟ್ಯಾಕ್ಸಿ ಚಾಲಕರು ಮತ್ತು ಕೆಲ ವರ್ಗದ ರಿಕ್ಷಾ ಚಾಲಕರು ಜುಲೈ 26ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲಿದ್ದು, ಸರಕಾರ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸ್ವಾಭಿಮಾನ್ ಟ್ಯಾಕ್ಸಿ ಹಾಗೂ ಆಟೊರಿಕ್ಷಾ ಸಂಘದ ಅಧ್ಯಕ್ಷ ಕೆ.ಕೆ.ತಿವಾರಿ ಹೇಳಿದ್ದಾರೆ. ಉಬೇರ್ ಹಾಗೂ ಓಲಾದಂಥ ಸಮುದಾಯ ಟ್ಯಾಕ್ಸಿಗಳು ಕಾನೂನುಬಾಹಿರ ಎಂದು ಅವರು ಆಪಾದಿಸಿದರು.
ಇಂಥ ಸಮುದಾಯ ಟ್ಯಾಕ್ಸಿಗಳನ್ನು ಕೂಡಾ ಕಾನೂನಿನಡಿ ತರಬೇಕು. ಅವರು ಆರ್‌ಟಿಓದಿಂದ ಕಡ್ಡಾಯವಾಗಿರುವ ಅನುಮತಿ ಪಡೆದಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News