ಕಡಬ ಪರಿಸರದ ಮೂರು ದೇವಸ್ಥಾನಗಳಲ್ಲಿ ಕಳ್ಳತನ
Update: 2016-07-25 11:34 IST
ಕಡಬ, ಜು.25: ಕಲ್ಲುಗುಡ್ಡೆಯ ರೆಂಜಿಲಾಡಿ ಗ್ರಾಮದಲ್ಲಿರುವ ಶ್ರಿ ನೂಜಿ ಉಳ್ಳಾಳ್ತಿ ದೈವಸ್ಥಾನದಲ್ಲಿ ಕಳ್ಳತನ ನಡೆದಿದೆ.
ದೈವಸ್ಥಾನದ ಹೊರಗಡೆ ಇರುವ ಕಂಪೌಂಡ್ ಹಾರಿ ಒಳಗೆ ನುಗ್ಗಿದ ಕಳ್ಳರು ಶ್ರಿ ಉಳ್ಳಾಳ್ತಿ ಅಮ್ಮನವರ ಮೂರ್ತಿ, ಕೊರಳಲ್ಲಿದ್ದ ಚಿನ್ನ, ಪ್ರತಿಮೆ ಹೀಗೆ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ ಪೂಜೆಗೆಂದು ಬಂದು ಪುರೋಹಿತರಾದ ಕೃಷ್ಣ ಹೆಬ್ಬಾರ್ ಬಾಗಿಲು ತೆರೆದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶ್ವಾನ ದಳ ಆಗಮಿಸುವ ಸಂಭವವಿದೆ.