×
Ad

ಇಬ್ಬರು ದಲಿತರ ಮೇಲೆ 25 ಮಂದಿಯ ತಂಡದಿಂದ ಬರ್ಬರ ಥಳಿತ

Update: 2016-07-25 20:06 IST

 ಹೊಸದಿಲ್ಲಿ, ಜು.25: ವಾಹನವೊಂದನ್ನು ಹಿಂದೆ ಹಾಕಿದ ಆರೋಪದಲ್ಲಿ ಮಹಾರಾಷ್ಟ್ರದ ಬೀಡ್‌ನಲ್ಲಿ 25 ಮಂದಿಯ ತಂಡವೊಂದು ದಲಿತ ಯುವಕರಿಬ್ಬರನ್ನು ರವಿವಾರ ಬರ್ಬರವಾಗಿ ಥಳಿಸಿದೆಯೆಂದು ಎಎನ್‌ಐ ವರದಿ ಮಾಡಿದೆ. ಅವರಿಬ್ಬರೂ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಆದರೆ, ಆರೋಪಿಗಳಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲವೆಂದು ಮಜಿಲ್ಗಾಂವ್‌ನ ಪೊಲೀಸ್ ಉಪಾಧೀಕ್ಷಕ ಹರಿ ಬಾಲಾಜಿ ತಿಳಿಸಿದ್ದಾರೆ.

ದಲಿತ ಯುವಕರ ವಾಹನದ ಮೇಲೆ ಭೀಮರಾವ್ ಅಂಬೇಡ್ಕರರ ಚಿತ್ರವನ್ನು ಕಂಡ ಬಳಿಕ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ದಲಿತ ದೌರ್ಜನ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News