ದೋಣಿ ಮಗುಚಿ ಮೀನುಗಾರ ಮೃತ್ಯು
Update: 2016-07-25 23:49 IST
ಕುಂದಾಪುರ, ಜು.25: ಕರ್ಕುಂಜೆ ಗ್ರಾಮದ ನೆಲ್ಲಿಮಕ್ಕಿ ಎಂಬಲ್ಲಿರುವ ಚಕ್ರ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ದೋಣಿ ಮಗುಚಿ ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ನೆಲ್ಲಿಮಕ್ಕಿಯ ಸಂಜೀವ ಮೊಗವೀರ(55) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಮನೆ ಸಮೀಪದ ನದಿಗೆ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಂಜೀವ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ರವಿವಾರ ಸಂಜೆ ಇವರ ಮೃತದೇಹವು ದೇವಲ್ಕುಂದ ಗ್ರಾಮದ ಬೈಲಾಡಿ ಸಮೀಪ ಹೊಳೆಯ ಬದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.