ಗಾಂಜಾ ಮಾರಾಟ: ಓರ್ವನ ಸೆರೆ
Update: 2016-07-25 23:50 IST
ಕಾಪು, ಜು.25: ಮೂಡಬೆಟ್ಟು ಗ್ರಾಮದ ಶಂಕರಪುರ ಸಮೀಪದ ಶಿವಾನಂದ ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶಂಕರಪುರ ಸಾಲ್ಮರ ರಸ್ತೆಯ ನಿವಾಸಿ ಕ್ಲೆಮೆಂಟ್ ಅನಾರ್ಲ್ಡ್(34) ಎಂದು ಗುರುತಿಸಲಾಗಿದೆ. ಈತ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಕಾಪು ಠಾಣಾಧಿಕಾರಿ ಜಗದೀಶ್ ರೆಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿತು.
ಬಂಧಿತನಿಂದ ಸುಮಾರು 10ಸಾವಿರ ರೂ. ವೌಲ್ಯದ 728ಗ್ರಾಂ ಗಾಂಜಾ ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.