ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರಿಗೆ ನಗದು ಪುರಸ್ಕಾರ

Update: 2016-07-25 18:23 GMT

ಮಂಗಳೂರು,ಜು.25: ಉಳ್ಳಾಲ ಸಮುದ್ರತೀರದಲ್ಲಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಏಳು ವರ್ಷದ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕ ರಾಘವೇಂದ್ರರ ಉತ್ತಮ ಸೇವೆಯನ್ನು ಗುರುತಿಸಿ ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕದಳದ ಮೇಲಧಿಕಾರಿಗಳು ನಗದು ಪುರಸ್ಕಾರ ಮಂಜೂರು ಮಾಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ಗೃಹರಕ್ಷಕ ರಾಘವೇಂದ್ರ ಉಳ್ಳಾಲ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೇ.11ರಂದು ತಮಿಳುನಾಡಿನ ಅನಂತಪುರದ 15 ಜನರ ತಂಡದಲ್ಲಿದ್ದ 7 ವರ್ಷದ ಬಾಲಕಿ ಮಸ್ಕನ್ ಎಂಬವರು ಸಮುದ್ರದ ಸೆಳೆತಕ್ಕೆ ಸಿಲುಕಿ ಸುಮಾರು 20 ಮೀಟರ್ ದೂರಕ್ಕೆ ಸೆಳೆದೊಯ್ದಿದ್ದ ಸಮಯದಲ್ಲಿ ಸಮವಸ್ತ್ರದಲ್ಲಿಯೇ ಸಮುದ್ರಕ್ಕೆ ಹಾರಿ ಈಜಿ ಬಾಲಕಿಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಇವರ ಉತ್ತಮ ಸೇವೆಯನ್ನು ಗುರುತಿಸಿದ ಜಿಲ್ಲಾ ಅಧೀಕ್ಷಕ ಡಾ. ಮುರಲೀ ಮೋಹನ್ ಚೂಂತಾರು ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್‌ರಾವ್ ಬೋರಸೆ ಇವರ ಉಪಸ್ಥಿತಿಯಲ್ಲಿ ಮೇ ತಿಂಗಳಿನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಎಂಬುದಾಗಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News