59.46 ಲಕ್ಷ ರೂ. ನಿವೃತ್ತಿವೇತನ ವಂಚನೆ ಪ್ರಕರಣ: 8 ಮಂದಿಯ ವಿರುದ್ಧ ವಿಜಿಲೆನ್ಸ್ ಕೇಸು ದಾಖಲು

Update: 2016-07-26 05:22 GMT

ತೃಶೂರ್,ಜುಲೈ 26: ನಕಲಿ ದಾಖಲೆಗಳನ್ನು ಸೃಷ್ಟಿಸಿ 59.46 ಲಕ್ಷರೂಪಾಯಿ ನಿವೃತ್ತಿ ವೇತನವನ್ನು ವಂಚಿಸಿದ ಖಜಾನೆ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಕೇಸು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೃತರಾಗಿದ್ದವರ ಸಹಿತ ಹತ್ತೊಂಬತ್ತು ಮಂದಿಯ ನಿವೃತ್ತಿವೇತನವನ್ನು ನಕಲಿ ದಾಖಲೆ ಸೃಷ್ಟಿಸಿ ಈ ವಂಚಕರು ಲಪಟಾಯಿಸಿದ್ದರೆನ್ನಲಾಗಿದೆ.

ಕೋಝಿಕ್ಕೋಡ್ ಉಪಖಜಾನೆಯಲ್ಲಿ 2010-14ರ ಅವಧಿಯಲ್ಲಿ ಜೂನಿಯರ್ ಸುಪರಿಂಟೆಂಡೆಂಟ್ ಆಗಿದ್ದ ಕೆ.ಎಂ. ಅಲಿಕುಂಞಿ ಸಹಿತ ಎಂಟು ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಖಜಾನೆ ಇಲಾಖಾನಿರ್ಧೇಶಕರ ನಿರ್ದೇಶನ ಪ್ರಕಾರ ವಿಜಿಲೆನ್ಸ್ ಡೈರೆಕ್ಟೊರೇಟ್ ತನಿಖೆಗೆ ಆದೇಶ ಹೊರಡಿಸಿತ್ತು ಎಂದು ತಿಳಿದು ಬಂದಿದೆ. ವಿಜಿಲೆನ್ಸ್ ಡಿವೈಎಸ್ಪಿ ಎ.ರಾಮಚಂದ್ರನ್‌ರು ನಡೆಸಿದ್ದ ತನಿಖೆಯಲ್ಲಿ 2010-14ರ ಅವಧಿಯಲ್ಲಿ ನಕಲಿ ದಾಖಲೆಯನ್ನು ಸೃಷ್ಟಿಸಿ ಹತ್ತೊಂಬತ್ತು ಮಂದಿಯ ನಿವೃತ್ತಿ ವೇತನವನ್ನು ಲಪಟಾಯಿಸಿರುವುದು ಪತ್ತೆಯಾಗಿತ್ತು. ಮೃತರಾದ ನಿವೃತ್ತಿವೇತನದಾರರ ಹೆಸರಲ್ಲಿ ನಕಲಿ ಅರ್ಜಿಗಳನ್ನು ತಯಾರಿಸಿ ಚೆಕ್‌ಬುಕ್‌ಗಳನ್ನು ತಮ್ಮ ಬಳಿ ಇಟ್ಟುಕೊಂಡು ನಕಲಿ ಸಹಿಹಾಕಿ ಅಲಿಕುಂಞಿ ಹಣ ಲಪಟಾಯಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News