×
Ad

ಸೌದಿಯಲ್ಲಿ ನರ್ಸಿಂಗ್ ಕ್ಷೇತ್ರಕ್ಕೂ ಹಬ್ಬಲಿರುವ ನಿತಾಖತ್!

Update: 2016-07-26 11:14 IST

ಕೊಚ್ಚಿ, ಜುಲೈ 26; ಸೌದಿಯಲ್ಲಿ ನರ್ಸಿಂಗ್ ಕ್ಷೇತ್ರಕ್ಕೂ ನಿತಾಖತ್ ನಿಯಮಗಳನ್ನು ಅನ್ವಯಗೊಳಿಸಲಾಗುವುದು ಎಂದು ವರದಿಯಾಗಿದೆ. ಇತರ ಕ್ಷೇತ್ರಗಳಲ್ಲಿರುವಂತೆ ನರ್ಸಿಂಗ್ ಕ್ಷೇತ್ರದಲ್ಲಿ ನಿತಾಖತ್ ಜಾರಿಗೊಳಿಸಲು ಸಮಯ ಮಿತಿಯನ್ನು ನಿಗದಿಗೊಳಿಸಿಲ್ಲವಾದರೂ ಇಲ್ಲಿಯೂ ಗರಿಷ್ಠ ಸ್ವದೇಶಿಕರಣ ನಡೆಸಬೇಕೆಂದು ಆರೋಗ್ಯಸಚಿವಾಲಯ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

 ಆರೋಗ್ಯ ಸಚಿವಾಲಯದ ಆದೇಶದ ಪ್ರಯುಕ್ತ ಸೌದಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸ್ವದೇಶಿ ನರ್ಸ್‌ಗಳ ನೇಮಕಾತಿಯನ್ನು ಹೆಚ್ಚಿಸಲಾಗಿದೆ.ನಿತಾಖತ್‌ನೊಂದಿಗೆ ನೇಮಕಾತಿನಲ್ಲಿ ಕಠಿಣ ನಿಯಂತ್ರಣ ಅಳವಡಿಸಲಾಗಿದ್ದು ವಿದೇಶಿ ನರ್ಸ್ ಉದ್ಯೋಗಾಂಕ್ಷಿಗಳಿಗೆ ಪ್ರತಿಕೂಲವಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ.

ಧಾರ್ಮಿಕ ನಿಬಂಧನೆಗಳು ಇರುವುದರಿಂದ ಸೌದಿಯಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸ್ವದೇಶಿ ಮಹಿಳೆಯರು ಈ ಮೊದಲು ಹಿಂಜರಿಯುತ್ತಿದ್ದರು. ಇದು ವಿದೇಶಿ ನರ್ಸಿಂಗ್ ಉದ್ಯೋಗಾಂಕಾಕ್ಷಿಗಳಿಗೆ ಅವಕಾಶವನ್ನು ಒದಗಿಸಿತ್ತು. ಆದರೆ ಇದೀಗ ಸೌದಿ ಮಹಿಳೆಯರಿಗೆ ನರ್ಸಿಂಗ್ ಕುರಿತು ತರಬೇತಿನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News