ಶಾಟ್‌ಪುಟ್ ಪಟು ಇಂದ್ರಜಿತ್ ಸಿಂಗ್ ಡೊಪಿಂಗ್ ಪರೀಕ್ಷೆಯಲ್ಲಿ ಫೇಲ್
Update: 2016-07-26 12:49 IST
ಹೊಸದಿಲ್ಲಿ, ಜು. 26: ಕುಸ್ತಿಪಟು ನರಸಿಂಗ್ ಯಾದವ್ ಅವರು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವರದಿ ಬಂದ ಬೆನ್ನಲ್ಲೆ ಭಾರತದ ಇನ್ನೊಬ್ಬ ಅಥ್ಲೀಟ್ ಶಾಟ್‌ಪುಟ್ ಪಟು ಇಂದ್ರಜಿತ್ ಸಿಂಗ್ ಡೊಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಈ ಕಾರಣದಿಂದಾಗಿ ಇಂದ್ರಜಿತ್ ಸಿಂಗ್ ಮುಂಬರುವ ರಿಯೋ ಒಲಿಂಪಿಕ್ಸ್ ಸ್ಪರ್ಧೆಯಿಂದ ಹೊರಬೀಳುವ ಸಾಧ್ಯತೆ ಕಂಡು ಬಂದಿದೆ.
ಇಂದ್ರಜಿತ್ ಅವರ 'ಎ' ಸ್ಯಾಂಪಲ್ ಪರೀಕ್ಷೆಯಲ್ಲಿ ನಿಷೇಧಿತ ಮದ್ದು ಸ್ಪೀರಾಯಿಡ್ ಸೇವನೆ ಖಚಿತವಾಗಿದೆ ಎಂದು ನಾಡಾ ತಿಳಿಸಿದೆ. ಬಿ ಸ್ಯಾಂಪಲ್ ಪರೀಕ್ಷೆ ನಡೆದಿದ್ದು, ಇದರಲ್ಲೂ ವಿಫಲವಾದರೆ ಇಂದ್ರಜಿತ್‌ಗೆ ರಿಯೋ ಒಲಿಂಪಿಕ್ಸ್ ಟಿಕೆಟ್ ತಪ್ಪಲಿದೆ. .
ಇಂದ್ರಜಿತ್ ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಇಂದ್ರಜಿತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದರು ಇದರೊಂದಿಗೆ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.