ಅಬುಧಾಬಿಗೆ ಆಗಮಿಸಿದ ಸೌರಶಕ್ತಿ ಚಾಲಿತ ವಿಮಾನ ’ಸೋಲಾರ್ ಇಂಪಲ್ಸ್ 2’
Update: 2016-07-26 14:13 IST
ಅಬುಧಾಬಿ, ಜು.26: ವಿಶ್ವಪರ್ಯಟನೆ ಆರಂಭಿಸಿದ್ದ ಸೌರಶಕ್ತಿ ಚಾಲಿತ ವಿಶ್ವದ ದೊಡ್ಡ ವಿಮಾನ ಎನಿಸಿಕೊಂಡಿರುವ ವಿಮಾನ ’ಸೋಲಾರ್ ಇಂಪಲ್ಸ್ 2’ ಮಂಗಳವಾರ ಮುಂಜಾನೆ ಯಶಸ್ವಿಯಾಗಿ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
2015ರ ಮಾರ್ಚ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ವಿಮಾನ ಒಂದು ವರ್ಷಕ್ಕೂ ಅಧಿಕ ಕಾಲ ವಿಶ್ವದ ನಾನಾಭಾಗಗಳಿಗೆ ತೆರಳಿದೆ. 25,000 ಮೈಲು (40,000-ಕಿಲೋ ಮೀಟರ‍್) ದೂರ ಸಂಚರಿಸಿದೆ. ಭಾರತ, ಚೀನಾ , ಅಮೆರಿಕ, ಇಟಲಿ, ಈಜಿಪ್ಟ್, ಯುಎಇ ದೇಶಗಳಿಗೆ ತೆರಳಿದೆ
ಈ ವಿಮಾನ ಸುಮಾರು 500 ಗಂಟೆಗಳ ಕಾಲ ಇಂಧನ ಇಲ್ಲದೆ ವಿವಿಧ ದೇಶಗಳಿಗೆ ತೆರಳಿ ವಾಪಸಾಗಿದೆ.