ಉಜಿರೆ: ಕಸದ ರಾಶಿಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಾಗರಿಕರು

Update: 2016-07-26 14:48 GMT

ಬೆಳ್ತಂಗಡಿ, ಜು.26: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳಸದಗುರಿ ಎಂಬಲ್ಲಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೆಟ್ಟದಂತೆ ತಲೆ ಎತ್ತಿದ್ದು ಸ್ಥಳೀಯ ನಿವಾಸಿಗಳನ್ನು ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಸ್ಥಳೀಯರು ಮೌಖಿಕವಾಗಿ, ಲಿಖಿತವಾಗಿ ಮನವಿಗಳನ್ನು ಪದೇ ಪದೇ ಮಾಡುತ್ತಿದ್ದರೂ ಗ್ರಾಮ ಪಂಚಾಯತ್ ಆಡಳಿತವಂತೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಪಳಸದಗುರಿ ಎಂಬಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಳೆಗಾಲದ ಪ್ರಾರಂಭದಿಂದಲೂ ಇಲ್ಲಿ ಕಸ ತಂದು ಸುರಿಯಲಾಗುತ್ತಿದ್ದು ಕಸದ ರಾಶಿ ಪರ್ವತದಂತೆ ಬೆಳೆದಿದೆ. ಮಲೇರಿಯಾ, ಡೆಂಗ್, ಚಿಕೂನ್ ಗುನ್ಯಾ ಮತ್ತಿತರ ಭಯಾನಕ ಸಾಂಕ್ರಾಮಿಕ ರೊಗಗಳು ಎಲ್ಲೆಡೆ ಹರಡುತ್ತಿರುವ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ರೋಗಗಳ ಭೀತಿಯಲ್ಲಿದ್ದು ಸ್ಥಳೀಯ ಕುಟುಂಬಗಳಲ್ಲಿ ಆತಂಕ ಹುಟ್ಟಿಸಿದೆ.

ಇನ್ನೊಂದೆಡೆ ಈ ಘನ ತ್ಯಾಜ್ಯ ವಿಲೇವಾರಿ ಘಟಕವು ಎತ್ತರ ಪ್ರದೇಶದಲ್ಲಿದ್ದು ಅದರ ಸುತ್ತಲು ತಗ್ಗು ಪ್ರದೇಶದಲ್ಲಿರುವ ಸ್ಥಳೀಯರ ಬಾವಿ, ಕೆರೆ, ತೊರೆಗಳ ನೀರು ಕಲುಷಿತಗೊಳಿಸುತ್ತಿದೆ. ಸ್ಥಳೀಯವಾಗಿ ಯಾವುದೇ ರೋಗಗಳು ಹುಟ್ಟಿಕೊಳ್ಳುವ ಅಪಾಯ ಕಂಡು ಬರುತ್ತಿದೆ ಎಂಬ ಆತಂಕ ಇಲ್ಲಿನ ನಿವಾಸಿಗಳಿಂದ ವ್ಯಕ್ತವಾಗಿದೆ. ನಗರವಾಗಿ ಬೆಳೆಯುತ್ತಿರುವ ಉಜಿರೆಯ ಕಸವೆಲ್ಲವೂ ಇಲ್ಲಯೇ ಬಂದು ಬೀಳುತ್ತಿದೆ. ಆದರೆ ಇಲ್ಲಿನ ತ್ಯಾಜ್ಯ ಘಟಕ ಮಾತ್ರ ಇನ್ನೂ ಸುಸಜಿ ್ಜತವಾಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇಲ್ಲಿನ ಜನರ ಸಮಸ್ಯೆಯ ಬಗ್ಗೆ ಇನ್ನಾದರೂ ತಾಲೂಕು ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಕೂಡಲೇ ಇತ್ತ ಗಮನ ಹರಿಸಿ ಪಳಸದಗುರಿಯ ಅವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಆಡಳಿತಕ್ಕೆ ಸೂಕ್ತ ಕ್ರಮಕ್ಕೆ ಸೂಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News