×
Ad

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

Update: 2016-07-26 20:24 IST

ಉಳ್ಳಾಲ, ಜು.26: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಹಾಸಭೆಯು ಇತ್ತೀಚೆಗೆ ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನ್ ತೋಡಾರ್ ಅಧ್ಯಕ್ಷತೆಯಲ್ಲಿ ಉಳ್ಳಾಲ ಎಸ್ಸೆಸ್ಸಫ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮನ್ಸೂರ್ ಅಹ್ಮದ್ ಹಳೆಕೋಟೆ ಉದ್ಘಾಟಿಸಿದರು. ಮುಹಮ್ಮದ್ ಮದನಿ ದುವಾ ನೆರವೇರಿಸಿದರು. ಸಭೆಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಖುಬೈಬ್ ತಂಙಳ್, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ನವಾಝ್ ಅಮ್ಜದಿ, ಶಬ್ಬಿರ್ ಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೊಟೇಪುರ, ಕಾರ್ಯದರ್ಶಿಗಳಾಗಿ ಸಿರಾಜ್, ತಾಜುದ್ದೀನ್ ಹಳೆಕೋಟೆ, ಹಫೀಝ್ ಕೋಡಿ ಕೋಶಾಧಿಕಾರಿಯಾಗಿ ಇಲ್ಯಾಸ್ ಕೈಕೊ, ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೊಟೇಪುರ, ಇಶಾರ ಅಮೀರ್ ಅಬ್ದುಲ್ ಘನಿ, ರೀಡ್ ಪ್ಲಸ್ ಅಮೀರಾಗಿ ಹನೀಫ್ ಬೊಟ್ಟು, ಎಸ್‌ಬಿಎಸ್ ನಿರ್ದೇಶಕರಾಗಿ ಅಹ್ಸನ್ ಒಂಬತ್ತುಕೆರೆ, ಉಳ್ಳಾಲ ಮುತಲ್ಲಿಮ್ ವಿಂಗ್ ಅಮೀರಾಗಿ ಮುಝಮ್ಮಿಲ್ ಉಸ್ತಾದ್, ಅಲ್ ಅಮೀನ್ ರಿಲೀಫ್ ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಹೊಂಬೆಳಕು ಸಹಿತ 27 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಮುಝಮ್ಮಿಲ್ ಕೊಟೇಪುರ ಸ್ವಾಗತಿಸಿ, ತಾಜುದ್ದೀನ್ ಹಳೆಕೋಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News