×
Ad

ಪ್ಯಾರಿಸ್: ಚರ್ಚ್ ಮೇಲೆ ದಾಳಿ; ಓರ್ವನ ಸಾವು

Update: 2016-07-26 21:18 IST

ಪ್ಯಾರಿಸ್, ಜು. 26: ಇಬ್ಬರು ದುಷ್ಕರ್ಮಿಗಳು ಮಂಗಳವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಚರ್ಚೊಂದರ ಮೇಲೆ ದಾಳಿ ನಡೆಸಿ ಓರ್ವ ಧರ್ಮ ಗುರುವನ್ನು ಬ್ಲೇಡ್‌ನಿಂದ ಇರಿದು ಕೊಂದರು ಹಾಗೂ ಇನ್ನೊಬ್ಬ ಒತ್ತೆಯಾಳನ್ನು ಗಂಭೀರವಾಗಿ ಗಾಯಗೊಳಿಸಿದರು.
ಬಳಿಕ ಭದ್ರತಾ ಪಡೆಗಳು ದುಷ್ಕರ್ಮಿಗಳನು ಗುಂಡು ಹಾರಿಸಿ ಕೊಂದವು.
ದುಷ್ಕರ್ಮಿಗಳ ಗುರುತು ಮತ್ತು ಉದ್ದೇಶಗಳ ಬಗ್ಗೆ ತಿಳಿದುಬಂದಿಲ್ಲ. ಪ್ರಕರಣದ ತನಿಖೆಯನ್ನು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ನಿಗ್ರಹ ಘಟಕಕ್ಕೆ ವಹಿಸಲಾಗಿದೆ.
ಧರ್ಮ ಗುರುವಿನ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
‘‘ಒಂದು ಹಂತದಲ್ಲಿ ಇಬ್ಬರು ದುಷ್ಕರ್ಮಿಗಳು ಚರ್ಚ್‌ನಿಂದ ಹೊರಬಂದರು. ಆಗ ಪೊಲೀಸರು ಅವರನ್ನು ಗುಂಡು ಹಾರಿಸಿ ಕೊಂದರು’’ ಎಂದು ಆಂತರಿಕ ಸಚಿವಾಲದಯದ ವಕ್ತಾರರೋರ್ವರು ತಿಳಿಸಿದರು.
ಆಕ್ರಮಣ ‘‘ಅನಾಗರಿಕ’’ ಎಂಬುದಾಗಿ ಪ್ರಧಾನಿ ಮ್ಯಾನುಯಲ್ ವಾಲ್ಸ್ ಬಣ್ಣಿಸಿದ್ದಾರೆ ಹಾಗೂ ಇದು ಎಲ್ಲ ಕ್ಯಾಥೊಲಿಕರು ಮತ್ತು ಇಡೀ ಫ್ರಾನ್ಸ್‌ನ ಮೇಲೆ ನಡೆದ ದಾಳಿಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News