×
Ad

ಬಾಂಗ್ಲಾ: ಪೊಲೀಸ್ ದಾಳಿಯಲ್ಲಿ 9 ಉಗ್ರರು ಹತ

Update: 2016-07-26 21:24 IST

ಢಾಕಾ, ಜು. 26: ಢಾಕಾದ ಉಪನಗರವೊಂದರಲ್ಲಿರುವ ಭಯೋತ್ಪಾದಕರ ಅಡಗುದಾಣವೊಂದರ ಮೇಲೆ ಮಂಗಳವಾರ ಮುಂಜಾನೆ ಬಾಂಗ್ಲಾದೇಶಿ ಪೊಲೀಸರು ದಾಳಿ ನಡೆಸಿ ಒಂಭತ್ತು ಶಂಕಿತ ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘‘ಎರಡು ಗಂಟೆಗಳ ಸುದೀರ್ಘ ಕಾಳಗದ ಬಳಿಕ ಒಂಬತ್ತು ಭಯೋತ್ಪಾದಕರನ್ನು ಕೊಲ್ಲಲಾಗಿದೆ’’ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್‌ನ ಡೆಪ್ಯುಟಿ ಕಮಿಶನರ್ ಮಸೂದ್ ಅಹ್ಮದ್ ತಿಳಿಸಿದರು. ಇದೇ ಸಂದರ್ಭದಲ್ಲಿ ಓರ್ವ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದರು.
ಮಧ್ಯರಾತ್ರಿಯ ಬಳಿಕ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಶಂಕಿತರು ಸಣ್ಣ ಕೈಬಾಂಬ್‌ಗಳನ್ನು ಎಸೆದ ಬಳಿಕ, ಪೊಲೀಸರು ಅಪಾರ್ಟ್‌ಮೆಂಟ್ ಕಟ್ಟಡವನ್ನು ಸುತ್ತುವರಿದರು ಎಂದರು.
ಭಯೋತ್ಪಾದಕರು ರಾತ್ರಿಯಿಡೀ ಪೊಲೀಸರತ್ತ ಗುಂಡು ಹಾರಿಸಿದರು. ಮುಂಜಾನೆಯ ವೇಳೆಗೆ, ಪೊಲೀಸರು ಅಂತಿಮ ದಾಳಿ ನಡೆಸಿ ಶಂಕಿತ ಭಯೋತ್ಪಾದಕರನ್ನು ಹತ್ತಿಕ್ಕಿದರು.
ಭಯೋತ್ಪಾದಕರು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಪೊಲೀಸ್ ಅಧಿಕಾರಿ ಬಹಿರಂಗಪಡಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News