×
Ad

ಬಂದ್ಯೋಡು: ಸರಣಿ ಅಪಘಾತ; ಬಾಲಕಿ ಮೃತ್ಯು

Update: 2016-07-26 21:47 IST

ಕಾಸರಗೋಡು, ಜು.26: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡುವಿನಲ್ಲಿ ಮಂಗಳವಾರ ಸಂಜೆ ನಡೆದ ಸರಣಿ ಅಪಘಾತದಲ್ಲಿ ಬಾಲಕಿಯೋರ್ವಳು ಮೃತಪಟ್ಟು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಬಾಲಕಿಯನ್ನು ಮೊಗ್ರಾಲ್ ಕಡವತ್ನ ಅಶ್ರಫ್ -ಸೆಮೀರಾ ದಂಪತಿಯ ಪುತ್ರಿ ಫಾತಿಮತ್ ನಿಹಾಲ್ (4) ಎಂದು ಗುರುತಿಸಲಾಗಿದೆ.

ಗಾಯಗೊಂಡವರು ಪೈವಳಿಕೆ ಕಾಯರ್ಕಟ್ಟೆಯ ಅಬ್ದುಲ್ ಖಾದರ್, ಅಶ್ರಫ್, ಸಮೀರಾ, ಬಾತೀಷಾ ಎಂದು ಗುರುತಿಸಲಾಗಿದೆ. ಒಟ್ಟು 10 ಮಂದಿ ಗಾಯಗೊಂಡಿದ್ದು, ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಉಪ್ಪಳದಿಂದ ಕಾಸರಗೋಡು ಮತ್ತು ಕಾಸರಗೋಡು ಕಡೆಯಿಂದ ಉಪ್ಪಳ ಕಡೆಗೆ ತೆರಳುತ್ತಿದ್ದ ಎರಡು ಕಾರುಗಳು ಮತ್ತು ಎರಡು ಆಟೊರಿಕ್ಷಾಗಳ ನಡುವೆ ಅಪಘಾತ ನಡೆದಿದೆ.

 ಇನೋವಾ ಕಾರು ಬಂದ್ಯೋಡಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಆಟೊಗೆ ಢಿಕ್ಕಿ ಹೊಡೆದಿದ್ದು , ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಗಂಭೀರ ಗಾಯಗೊಂಡ ಬಾಲಕಿ ನಿಹಾಲ್ಳನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News