ಬಾಳಿಗಾ ಹತ್ಯೆ ಪ್ರಕರಣ: ಆರೋಪಿ ಶೈಲೇಶ್ ಬಿಡುಗಡೆ
Update: 2016-07-26 22:02 IST
ಮಂಗಳೂರು, ಜು. 26: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹೆತ್ಯ ಪ್ರಕರಣದ ಆರೋಪಿ ಶೈಲು ಅಲಿಯಾಸ್ ಶೈಲೇಶ್ (40) ಜಾಮೀನು ಪಡೆದು ಇಂದು ಬಿಡುಗಡೆಗೊಂಡಿದ್ದಾರೆ.
ಬಾಳಿಗಾ ಹತ್ಯೆ ಪ್ರಕರಣದಲ್ಲಿ ಬರ್ಕೆ ಠಾಣಾ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆರನೆ ಆರೋಪಿ ಶೈಲೇಶ್‌ನನ್ನು ಇಲ್ಲಿನ ಎರಡನೆ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಜುಲೈ 19ರಂದು ಜಾಮೀನು ನೀಡಿತ್ತು. ಅದರಂತೆ ಶೈಲೇಶ್ ಮಂಗಳವಾರ ಬಿಡುಗಡೆಗೊಂಡಿದ್ದಾನೆ.
ಆರೋಪಿಯ ಪರವಾಗಿ ವೈ.ವಿಕ್ರಮ್ ಹೆಗ್ಡೆ, ಎನ್.ನರಸಿಂಹ ಹೆಗ್ಡೆ, ಅಬ್ದುಲ್ ನಝೀರ್ ಮೂಡುಶೆಡ್ಡೆ, ಅಷ್ಫಾಕ್ ವಾದಿಸಿದ್ದರು.