×
Ad

ಹಾಲೆಮಜಲು: ಕಾಡು ಕುರಿ ರಕ್ಷಣೆ

Update: 2016-07-26 23:57 IST


ಸುಬ್ರಹ್ಮಣ್ಯ, ಜು.26: ವಿನಾಶದಂಚಿನಲ್ಲಿರುವ ಕಾಡುಕುರಿಯನ್ನು ನಾಯಿಗಳು ಓಡಿಸಿಕೊಂಡು ಬಂದಾಗ ಕುರಿಯು ಮನೆಯೊಳಗೆ ಬಂದು ರಕ್ಷಣೆ ಪಡೆದ ಘಟನೆ ಸೋಮವಾರ ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿನಲ್ಲಿ ನಡೆದಿದೆ.ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ಎಂಬಲ್ಲಿ ಪಾವನಕೃಷ್ಣರವರ ಮನೆಗೆ ಕಾಡುಕುರಿಯನ್ನು ನಾಯಿಗಳು ಓಡಿಸಿಕೊಂಡು ಬಂದಾಗ ಕುರಿ ಮನೆಯೊಳಗೆ ಬಂತು, ತಕ್ಷಣ ಮನೆಯವರು ಬಾಗಿಲು ಹಾಕಿ ಕುರಿಯನ್ನು ರಕ್ಷಿಸಿದರು. ನಂತರ ಗ್ರಾಮ ಅರಣ್ಯ ಸಮಿತಿ ಸದಸ್ಯ ದಿನೇಶ್ ಹಾಲೆಮಜಲು ಅವರಿಗೆ ತಿಳಿಸಿದರು. ಅವರು ತಕ್ಷಣ ಉಪವಲಯ ಅರಣ್ಯಾಧಿಕಾರಿ ಅಜಿತ್‌ಕುಮಾರ್ ಜೊತೆ ಪಾವನ ಕೃಷ್ಣ ಮನೆಗೆ ತೆರಳಿ ಕುರಿಯನ್ನು ವಶಕ್ಕೆ ಪಡೆದುಕೊಂಡು ಗುತ್ತಿಗಾರು ಪಶು ವೈದ್ಯಾಧಿಕಾರಿಯವರಲ್ಲಿ ಚಿಕಿತ್ಸೆ ಕೊಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News