ಕೋಳಿ ಅಂಕ: ಮೂವರ ಬಂಧನ
Update: 2016-07-26 23:58 IST
ಕೋಟ, ಜು.26: ಕೆದೂರು ಗ್ರಾಮದ ತೆಂಕಬೆಟ್ಟು ಎಂಬಲ್ಲಿ ಸೋಮವಾರ ಸಂಜೆ ಕೋಳಿ ಅಂಕ ನಡೆಸುತ್ತಿದ್ದ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೆದೂರು ನಡುಬೆಟ್ಟುವಿನ ಚಂದ್ರ ಕುಲಾಲ್(29), ವಕ್ವಾಡಿ ನಿವಾಸಿಗಳಾದ ಸದಾನಂದ ಶೆಟ್ಟಿ(26), ಸುರೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ. ಪಾಂಡು ಪೂಜಾರಿ, ರಮೇಶ ಆಚಾರಿ, ಅಣ್ಣಪ್ಪ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ ಎರಡು ಕೋಳಿ, 2,780ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.