ಭದ್ರಾವತಿ: ಕಣಚೂರು ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಉದ್ಘಾಟನೆ
ಭದ್ರಾವತಿ, ಜು.26: ಬಡವರ ಆರೋಗ್ಯ ಸೇವೆಗೆ ಹೆಚ್ಚಿನ ಗಮನ ಹರಿಸುವುದು ಇಂದು ಅನಿವಾರ್ಯವಾಗಿದೆ. ಸಂಘ - ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಆಹಾರ ಸರಬರಾಜು ಮತ್ತು ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಕರೆ ನೀಡಿದರು.
ಅವರು ಭದ್ರಾವತಿಯ ಹಳೆನಗರ ಖಾಜಿ ಮೊಹಲ್ಲಾದಲ್ಲಿ ಸಿದ್ದೀಕ್-ಇ- ಅಕ್ಬರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರಂಭಿಸಲಾದ ಕಣಚೂರು ಆಸ್ಪತ್ರೆ ನಗರ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಬಲ್ಕೀಸ್‌ಬಾನು, ಶಾಸಕ ಎಂ. ಜೆ. ಅಪ್ಪಾಜಿ ಮತ್ತು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ್, ಟ್ರಸ್ಟ್‌ನ ಅಧ್ಯಕ್ಷ ಎಚ್.ಎಸ್. ಲಿಯಾಖತ್ ಅಲಿ ಖಾನ್ ಮಾತನಾಡಿದರು. ಟ್ರಸ್ಟ್‌ನ ಉಪಾಧ್ಯಕ್ಷ ರಫೀಕ್‌ಖಾನ್, ಕಾರ್ಯದರ್ಶಿಗಳಾದ ಅಬ್ದುಲ್ ಮುನಾಫ್, ನುಸ್ರತ್ ಅಹ್ಮದ್, ಖಜಾಂಚಿ ಮುಹಮ್ಮದ್ ರಕೀಬ್ ಮತ್ತು ಸಂಚಾಲಕ ಅಬಿದ್ ಆಲಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.