ಲೈಂಗಿಕ ದೌರ್ಜನ್ಯ: ಅಪರಾಧಿಗೆ ಹತ್ತು ವರ್ಷ ಕಠಿಣ ಶಿಕ್ಷೆ
Update: 2016-07-26 23:59 IST
ಕಾಸರಗೋಡು, ಜು.26: ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಂದೆಗೆ ಹತ್ತು ವರ್ಷ ಕಠಿಣ ಶಿಕ್ಷೆ ವಿಧಿಸಿ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ (ಒಂದನೆ) ತೀರ್ಪು ನೀಡಿದೆ.
ಆರೋಪಿ ಬಳಾಲ್ ಇರಿಯದ ಟೋಮಿ ಥೋಮಸ್‌ಗೆ ಹತ್ತು ವರ್ಷ ಸಜೆ ಹಾಗೂ20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2015ರ ಜೂನ್ 7ರಂದು ಘಟನೆ ನಡೆದಿತ್ತು. ಘಟನೆ ಬಳಿಕ ಬಾಲಕಿ ಶಾಲೆಗೆ ತೆರಲಿಲ್ಲ. ಇದರಿಂದ ಶಾಲಾಧಿಕಾರಿಗಳು ಬಾಲಕಿಯ ಮನೆಗೆ ಬಂದು ವಿಚಾ ರಿಸಿದಾಗ ಬೆಚ್ಚಿ ಬೀಳುವ ಅಂಶ ಬೆಳಕಿಗೆ ಬಂದಿತ್ತು.
ಬಳಿಕ ಜಿಲ್ಲಾ ಶಿಶು ಸಂರಕ್ಷಣಾ ಸಮಿತಿ ಮೂಲಕ ಪೊಲೀಸರಿಗೆ ದೂರು ನೀಡಲಾಗಿತ್ತು. ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಾಸಿಕ್ಯೂಶನ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಸುಧೀರ್ ಮೇಲತ್ ಹಾಜರಾಗಿದ್ದರು.