×
Ad

ಶಾಸಕ ಅಭಯಚಂದ್ರ ಜೈನ್‌ರಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ

Update: 2016-07-27 20:38 IST

ಮೂಡುಬಿದಿರೆ,ಜು.27: ಕನ್ನಡ ಮಾಧ್ಯಮ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ಥಳೀಯ ಜನ ಪ್ರತಿನಿಧಿಗಳೂ ಆಸಕ್ತಿ ವಹಿಸಬೇಕು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

 ಪಾಲಡ್ಕ ಗ್ರಾಮದ ಕಡಂದಲೆ ವಿದ್ಯಾಗಿರಿಯಲ್ಲಿರುವ ಅಂಗನವಾಡಿಯ 25 ವಿದ್ಯಾರ್ಥಿಗಳಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಸಮವಸ್ತ್ರವನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿದರು.

ಪಂಚಾಯತ್ ಉಪಾಧ್ಯಕ್ಷ ಲೀಲಾಧರ ಪೂಜಾರಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಕಾಂಗ್ರೆಸ್‌ಮುಖಂಡ ವಾಸುದೇವ ನಾಯಕ್, ಪಂಚಾಯತ್ ಸದಸ್ಯೆ ಸವಿತಾ ಟಿ. ಎನ್ ಉಪಸ್ಥಿತರಿದ್ದರು.

          ಸ್ಥಳೀಯ ಶಾಲಾ ಶಿಕ್ಷಕಿ ಪೌಲಿನ್ ಡಿಸೋಜ ತಮ್ಮ ಶಾಲೆಯ 76ಮಕ್ಕಳಿಗೆ ಶೂ ಹಾಗೂ ಬೆಲ್ಟ್ ಒದಗಿಸಬೇಕೆಂದು ಬೇಡಿಕೆ ಸಲ್ಲಿಸಿದ್ದು ಈ ಕುರಿತು ಸ್ಥಳೀಯರಿಂದ ಕೊಡುಗೆಯಾಗಿ ಒದಗಿಸಿಕೊಡುವುದಾಗಿ ಅಭಯಚಂದ್ರ ಜೈನ್ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭ ಉಪಸ್ಥಿತರಿದ್ದರು. ಟಿ.ಎನ್.ಕೆಂಬಾರೆ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News