ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ‘ಆರ್ಥಿಕ ಕ್ಷೇತ್ರದಲ್ಲಿ ಗ್ರಾಹಕ ಸೇವೆಯ ಪಾತ್ರ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ
ಮಂಗಳೂರು,ಜು.27 : ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ಆಗಸ್ಟ್ 1 ರಂದು ಸಂಜೆ 6 ಗಂಟೆಗೆ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ‘ಆರ್ಥಿಕ ಕ್ಷೇತ್ರದಲ್ಲಿ ಗ್ರಾಹಕ ಸೇವೆಯ ಪಾತ್ರ’(ರೋಲ್ ಆ್ ಕಸ್ಟಮರ್ ಸರ್ವಿಸ್ ಇನ್ ಪೈನಾನ್ಸ್ ಸೆಕ್ಟರ್) ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಯು. ರಾಮರಾವ್ ಹೇಳಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಓಮನ್ ಕೇಂದ್ರ ಬ್ಯಾಂಕ್‌ನ ತರಬೇತಿ ವಿಭಾಗದ ನಿರ್ದೇಶಕ ಡಾ. ಕೆ. ರಾಜೇಶ್ ನಾಯಕ್ ಉಪನ್ಯಾಸ ನೀಡುವರು. ಕೆನರಾ ರೊಬೆಕೋ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ ಲಿಮಿಟೆಡ್‌ನ ಮುಖ್ಯಸ್ಥ ಮುರಳೀಧರ್ ಜಿ. ಶೆಣೈ ಹಾಗೂ ನಗರದ ಚಾರ್ಟೆಡ್ ಅಕೌಟೆಂಟ್ ಎಸ್.ಎಸ್.ನಾಯಕ್ ಅವರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೌನ್ಸಿಲ್ ಕಾರ್ಯದರ್ಶಿ ಪಿ.ಬಿ. ಸರಳಾಯ, ಕೋಶಾಧಿಕಾರಿ ಶೋಭಾ ಪಿ. ರವೀಂದ್ರ ರಾವ್, ಸದಸ್ಯರಾದ ಪಿ. ರವೀಂದ್ರ ರಾವ್, ಕೆ.ವಿ. ಸೀತಾರಾಮ ಉಪಸ್ಥಿತರಿದ್ದರು.