×
Ad

ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ 24 ವಿದ್ಯಾರ್ಥಿಗಳು 8 ನೇ ಅಂತರಾಷ್ಟ್ರೀಯ ಜಾಂಬೂರಿ ಶಿಬಿರಕ್ಕೆ ಆಯ್ಕೆ

Update: 2016-07-27 22:41 IST

ಮಂಗಳೂರು ,ಜು.27: ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಭಾರತ್ ಸ್ಕೌಟ್‌ಮತ್ತು ಗೈಡ್ಸ್ ನ 24 ವಿದ್ಯಾರ್ಥಿಗಳು ಜುಲೈ 30 ರಿಂದ ಆಗಸ್ಟ್ 6 ವರೆಗೆ ಇಂಗ್ಲೇಂಡ್‌ನ ಚರ್ನ್‌ವುಡ್‌ನಲ್ಲಿ ನಡೆಯಲಿರುವ 8 ನೇ ಅಂತರಾಷ್ಟ್ರೀಯ ಜಾಂಬೂರಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊಘಿ.ಎಂ.ಬಿ. ಪುರಾಣಿಕ್ ಹೇಳಿದರು.

   ದೇಶಾದ್ಯಂತದಿಂದ 82 ಮಂದಿ ಹಾಗೂ ರಾಜ್ಯದಿಂದ 30 ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ಶಾರದಾ ಶಿಕ್ಷಣ ಸಂಸ್ಥೆಯಿಂದ 24 ಮಂದಿ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ಸಂಸ್ಥೆಯಿಂದ 6 ಮಂದಿಯಂತೆ ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

  ಅನೇಕ ಸ್ಕೌಟ್ಸ್ ಶಿಬಿರಗಳು, ಹೈಕ್ಸ್ ಮಾತ್ರವಲ್ಲದೇ ದ್ವಿತೀಯ ಮತ್ತು ತೃತೀಯ ಸೋಪಾನ, ರಾಜ್ಯಪುರಸ್ಕಾರ ಮತ್ತು ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿಶೇಷ ಪ್ರತಿಭೆಗಳಿಗೆ ಜಾಂಬೂರಿ ಶಿಬಿರಕ್ಕೆ ಅರ್ಹತೆ ದೊರೆತಿದೆ ಎಂದರು.

 ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಸದಸ್ಯರಾದ ಪ್ರದೀಪ್‌ಕುಮಾರ್ ಕಲ್ಕೂರ, ಪ್ರಾಂಶುಪಾಲ ಸುನೀತಾ ವಿ. ಮಡಿ ಹಾಗೂ ಉಪಪ್ರಾಂಶುಪಾಲ ದಯಾನಂದ ಕಟೀಲ್ ಮತ್ತು ಸ್ಕೌಟ್ ಮಾಸ್ಟರ್ ದಿನೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News