×
Ad

ಸಯ್ಯದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಉದ್ಘಾಟನೆ

Update: 2016-07-28 11:48 IST

ಸವಣೂರು, ಜು.28: ಇಲ್ಲಿನ ಚಾಪಲ್ಲ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಸಯ್ಯದ್ ಮುಹಮ್ಮದ್ ಹಾದೀ ತಂಙಲ್ ಮೆಮೋರಿಯಲ್ ದರ್ಸ್ ನ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಪಲ್ಲ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ನ ಅಧ್ಯಕ್ಷ ಮಹಮ್ಮದ್ ಹಾಜಿ ಕಣಿಮಜಲು  ವಹಿಸಿದ್ದರು. ಜಮಾಅತ್ ನ ಗೌರವಾಧ್ಯಕ್ಷ ಬಹುಮಾನ್ಯ ಸಯ್ಯದ್ ಹಾಮಿದ್ ತಂಙಳ್ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದರ್ಸ್ ತರಗತಿಗಳ ಮಹತ್ವವನ್ನು ವಿವರಿಸಿದ ತಂಙಳ್ ರವರು, ದರ್ಸ್ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು. ದರ್ಸ್ ಪ್ರಾರಂಭಿಸಲು ಉತ್ಸಾಹ ತೋರಿ, ಎಲ್ಲಾ ರೀತಿಯ ಸಹಕಾರವನ್ನು ನೀಡಿದ ಜಮಾಅತಿಗರನ್ನು ಶ್ಲಾಘಿಸಿದರು.

ನಂತರ ಮಾತನಾಡಿದ ಮುದರ್ರಿಸ್ ಬಹು ಅಶ್ರಫ್ ಫಾಝಿಲ್ ಬಾಖವಿರವರು ದರ್ಸ್ ತರಗತಿಯ ರೂಪುರೇಷೆಗಳನ್ನು ವಿವರಿಸಿದರು. ಈ ದರ್ಸ್ ತರಗತಿ ಪ್ರಾರಂಭಿಸಲು ಎಲ್ಲಾ ರೀತಿಯಿಂದಲೂ ಸಹಕರಿಸಿದ ಜಮಾಅತ್ ಗರನ್ನು, ಊರ ಪರವೂರ ದಾನಿಗಳನ್ನು,ಆಡಳಿತ ಸಮಿತಿ ಸದಸ್ಯರನ್ನು,ಅಲ್ ನೂರ್ ಪದಾಧಿಕಾರಿಗಳನ್ನು ಉಸ್ತಾದರು ಈ ಸಂದರ್ಭದಲ್ಲಿ ಸ್ಮರಿಸಿದರು.

ಪಂಡಿತ ಶ್ರೇಷ್ಠ,ವಿದ್ವಾಂಸ ಪಯ್ಯಕ್ಕಿ ಉಸ್ತಾದರವರು ದರ್ಸ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ದರ್ಸ್ ತರಗತಿಗಳು ಬೆಳೆದು ಬಂದ ಹಾದಿಯನ್ನು ವಿವರಿಸಿಕೊಟ್ಟರು. ದರ್ಸ್ ತರಗತಿಗಳಿಂದ ಮಸ್ಜಿದ್ ಗಳು ಸದಾ ಚಟುವಟಿಕೆಯಿಂದಿರುತ್ತವೆ. ಮಸೀದಿಗಳು ಜೀವಂತಿಕೆಯಿಂದ ಕೂಡಿದ್ದು ಜನರನ್ನು ತನ್ನೆಡೆಗೆ ಆಕರ್ಷಿಸುತ್ತವೆ. ಚಾಪಲ್ಲದ ಜನತೆ ದರ್ಸ್ ಆರಂಭಿಸಲು ತೋರಿಸಿದ ಉತ್ಸಾಹ ಅಂತಿಮ ದಿನದವರೆಗೂ ಇದೇ ರೀತಿ ನೆಲೆಗೊಳ್ಳಬೇಕು ಎಂದರು.

ಪಣೆಮಜಲು ಜಮಾಅತಿನ ಖತೀಬ್ ಬಹುಮಾನ್ಯ ಅಬ್ಬಾಸ್ ಮದನಿಯವರು ದರ್ಸ್ ತರಗತಿಗಳ ಕುರಿತು ಮಾತನಾಡಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ನ ಅಧ್ಯಕ್ಷ ಹಾಜಿ ಎಸ್.ಇಬ್ರಾಹಿಂ ಕಮ್ಮಾಡಿ,ಪಿ.ಬಿ.ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ,ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ,ಬಿ.ಪಿ.ಇಸ್ಮಾಯಿಲ್ ಹಾಜಿ ಬೈತಡ್ಕ,ಸಿ.ಎಂ.ಮೂಸಾ ಹಾಜಿ ಬೇರಿಕೆ ಪಣೆಮಜಲು,ಹಸೈನಾರ್ ಹಾಜಿ ಪರಣೆ ಆಗಮಿಸಿದ್ದರು.ವೇದಿಕೆಯಲ್ಲಿ ಚಾಪಲ್ಲ ಸದರ್ ಮುಅಲ್ಲಿಂ ಜಲಾಲುದ್ದೀನ್ ದಾರಿಮಿ,ಅಲ್ ನೂರ್ ಸೌದಿ ಕಮಿಟಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್ ,
ಅಧ್ಯಕ್ಷ ಅಬ್ದುಲ್ ರಝಾಕ್ ಚಾಪಲ್ಲ, ಕೆ.ಐ.ಸಿ.ದುಬೈ ಕಮಿಟಿಯ ಅಧ್ಯಕ್ಷ ಅಶ್ರಫ್ ಖಾನ್ ಮಾಂತೂರು, ಹಂಝ ದಾರಿಮಿ ಸರ್ವೆ,ಅಬ್ದುಲ್ ಜಲೀಲ್ ಫೈಝಿ ಆದೂರು,ಅಶ್ರಫ್ ಸಖಾಫಿ ಕುರ್ತಳ,ಅಬೂಬಕ್ಕರ್ ದಾರಿಮಿ ಸೋಂಪಾಡಿ,ಅಲ್ ನೂರ್ ಸೌದಿ ಕಮಿಟಿ ಮಾಜಿ ಅಧ್ಯಕ್ಷ ಬಶೀರ್ ಸವಣೂರು,ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ,ದಫ್ ಕಮಿಟಿ ಅಧ್ಯಕ್ಷ ರಫೀಕ್ ಅರ್ತಿಕೆರೆ,ಜಾಬೀರ್ ಫೈಝಿ ಬನಾರಿ,ಶೆರೀಫ್ ಅರ್ಶದಿ ಮಾಂತೂರು,ತಾಜುದ್ದೀನ್ ಫೈಝಿ ಪರಣೆ ಉಪಸ್ಥಿತರಿದ್ದರು.

 ಯಾಕೂಬ್ ದಾರಿಮಿ ಸ್ವಾಗತಿಸಿ,ಜಮಾಅತ್ ಕಾರ್ಯದರ್ಶಿ ಪಿ.ಕೆ.ಅಬೂಬಕ್ಕರ್ ವಂದಿಸಿದರು, ಅಲ್ ನೂರ್ ಯೂತ್ ಫೆಡರೇಶನ್ ಕಾರ್ಯದರ್ಶಿ ಸಿ.ಎ.  ನಿರೂಪಿಸಿದರು.

ಇಶಾ ನಮಾಝ್ ನಿರ್ವಹಿಸಿದ ನಂತರ ತಬರ್ರುಕ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News