×
Ad

ಮಟ್ಕಾ: ಐವರು ಆರೋಪಿಗಳ ಸೆರೆ

Update: 2016-07-28 21:24 IST

ಮಂಗಳೂರು, ಜು. 28: ಸಿಸಿಬಿ ಹಾಗೂ ದಕ್ಷಿಣ ಠಾಣಾ ಪೊಲೀಸರು ಪ್ರತ್ಯೇಕವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮಟ್ಕಾ ಆಟದಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 90 ಸಾವಿರ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರನ್ನು ನಾಗುರಿಯ ನಿವಾಸಿಗಳಾದ ಎಂ. ಜಯರಾಮ ಶೆಟ್ಟಿ (49), ರಿತೇಶ್ (35), ಕಂಕನಾಡಿಯ ಬಿಪಿನ್ ಸಾಲ್ಯಾನ್ (50), ನಾಗುರಿಯ ಕೀರ್ತನ್ ಕರ್ಕೇರಾ (31) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 90,900 ನಗದು, 3 ಮೊಬೈಲ್ ಹಾಗೂ ಮಟ್ಕಾ ಬರೆಯುವ ಚೀಟಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ನಾಗುರಿ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಆಟವಾಡುತ್ತಿದ್ದರು. ಆರೋಪಿಗಳನ್ನು ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಕಾರ್ಯಾಚರಣೆ ನಡೆಸಿದ್ದರು.

ದಕ್ಷಿಣ ಠಾಣಾ ಪೊಲೀಸರ ದಾಳಿ

ನಗರದ ನಿರೇಶ್ವಾಲ್ಯ ಜಂಕ್ಷನ್ ಕಡೆಯಿಂದ ಹೊಗೆ ಬಜಾರ್ ಕಡೆಗೆ ಹೋಗುವ ಗೂಡ್ ಶೆಡ್ಡೆ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ಲಾರಿಗಳು ನಿಲ್ಲುವ (ಯಾರ್ಡ್) ಸಾರ್ವಜನಿಕ ಸ್ಥಳದಲ್ಲಿ ನಂಬರಿನ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಕ್ಷಿಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಟ್ಕಾದಲ್ಲಿ ನಿರತನಾಗಿದ್ದ ಗೂಡುಶೆಡ್ಡೆಯ ನಿವಾಸಿ ಶಿವಾನಂದ ಶ್ಯಾನುಬೋಗ್ (53) ಎಂಬಾತನನ್ನು ಬಂಧಿಸಿ, ನಗದು 4.750ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದಕ್ಷಿಣ ಠಾಣೆ ಪೊಲೀಸ್ ಉಪ ನಿರೀಕ್ಷಕ ಅನಂತ ಮುರುಡೇಶ್ವರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News