×
Ad

ಇಂಡೋನೇಷ್ಯಾ: ನೇಣು ಕುಣಿಕೆಯಿಂದ ಗುರುದೀಪ್‌ ಪಾರು

Update: 2016-07-29 12:44 IST

ಸಿಲಾಕ್ಯಾಪ್, ಜು.29: ಇಂಡೋನೇಷ್ಯಾದಲ್ಲಿ ಮಾದಕ ದ್ರವ್ಯ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾಗಿದ್ದ  ಹದಿನಾಲ್ಕು ಆರೋಪಿಗಳ ಪೈಕಿ ಒಬ್ಬರಾಗಿರುವ ಭಾರತದ ಗುರುದೀಪ್ ಸಿಂಗ್ ಅವರು   ಗಲ್ಲಿನ ಕುಣಿಕೆಯಿಂದ ಪಾರಾಗಿದ್ದಾರೆ
2005ರಲ್ಲಿ ಹೆರಾಯಿನ್‌ ಸಾಗಾಟ ಆರೋಪದಲ್ಲಿ ಗುರುದೀಪ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಮಾದಕ ಸಾಗಾಟ ಆರೋಪದಲ್ಲಿ ಶಿಕ್ಷಗೆ ಗುರಿಯಾಗಿದ್ದವರಿಗೆ ಗುರುವಾರ ರಾತ್ರಿ ಗಲ್ಲುಶಿಕ್ಷೆ ನಿಗದಿಯಾಗಿತ್ತು.  ಮೂವರು ವಿದೇಶೀಯರು ಸೇರಿದಂತೆ ನಾಲ್ವರನ್ನು ಗುರುವಾರ ರಾತ್ರಿ  ಗಲ್ಲಿಗೇರಿಸಲಾಗಿದ್ದು,  ಗುರುದೀಪ್ ಸಿಂಗ್  ಪಾರಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಯಾಗಿದ್ದ ಗುರುದೀಪ್ ಸೇರಿದಂತೆ 10 ಮಂದಿಗೆ ಗಲ್ಲು ವಿಧಿಸಲಾಗಿಲ್ಲ ಎಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News