×
Ad

ಪ್ರಿಯತಮ/ಮೆ ಯ ವಂಚನೆಯನ್ನು ಪತ್ತೆ ಹಚ್ಚಲು ಯುಟ್ಯೂಬ್‌ನಲ್ಲಿ ಹೀಗೊಂದು ಏಜೆನ್ಸಿ!

Update: 2016-07-29 15:50 IST

ವಾಷಿಂಗ್ಟನ್, ಜುಲೈ 29: ಸ್ಟೆಫನಿಗೆ ತನ್ನ ಗೆಳೆಯನಲ್ಲಿ ಅಷ್ಟು ನಂಬಿಕೆ ಇರಲಿಲ್ಲ. ಅವಳು ಆತ ಎಷ್ಟುಪ್ರಾಮಾಣಿಕ ಎಂದು ಪರೀಕ್ಷಿಸಲು ಅವಳು, ನಿರ್ಧರಿಸಿದ್ದಳು. ಯುಟ್ಯೂಬ್‌ ನ 'ಟು ಕ್ಯಾಚ್ ಎ ಚೀಟರ್' ಎಂಬ ಸಂಸ್ಥೆಯ ಸಹಾಯಕ್ಕೆ ಕೋರಿಕೆ ಸಲ್ಲಿಸಿ ತನ್ನ ಪ್ರೇಮಿಯ ನೈಜಮುಖವನ್ನು ಅರಿತುಕೊಂಡಳೆಂದು ವರದಿಯಾಗಿದೆ. ತನ್ನ ಗೆಳೆಯನ ಸ್ವಭಾವನ್ನು ಬಹಿರಂಗ ಪಡಿಸುವ ವೀಡಿಯೊವನ್ನು ಕಂಡು ಸ್ಟೆಫನಿ ಹೌಹಾರುವಂತಾಗಿತ್ತು. ಸೂಪರ್‌ಮಾರ್ಕೆಟ್‌ನಲ್ಲಿ ಭೇಟಿಯಾದ ಅಪರಿಚಿತ ಮಹಿಳೆಯನ್ನು ಅನವಶ್ಯವಾಗಿ ಮೈಮುಟ್ಟುವುದು. ಮತ್ತೊಮ್ಮೆ ಭೇಟಿಯಾಗೋಣ ಎಂದು ತನ್ನ ವಿವರಗಳನ್ನು ಆಕೆಗೆ ನೀಡುವುದು ಸ್ಟೆಫನಿಯ ಬಾಯ್‌ಫ್ರೆಂಡ್ ಮಾಡಿಬಿಟ್ಟಿದ್ದ. ಅಮೆರಿಕದ ಪ್ರೇಮಿಗಳು ಪರಸ್ಪರ ಒಬ್ಬೊರಿಗೊಬ್ಬರು ನಡೆಸುವ ವಂಚನೆಯನ್ನು ಬಹಿರಂಗಗೊಳಿಸುವ ಏಜೆನ್ಸಿಯ ಈ ವೀಡಿಯೊಕ್ಕೆ ಈಗ ಭಾರೀ ಪ್ರಚಾರ ಸಿಕ್ಕಿದೆ ಎಂದುವರದಿ ತಿಳಿಸಿದೆ.

    ಗ್ರೋಸರಿ ಸ್ಟೋರ್‌ನ ಕಪಾಟುಗಳ ಮರೆಯಲ್ಲಿ ಸ್ಟೆಫನಿಯ ಪ್ರಿಯತಮ ಮೈಕಲ್, ಲಿಸಾ ಎಂಬ ರೂಪದರ್ಶಿಯೊಂದಿಗೆ ಸರಸಸಲ್ಲಾಪದಲ್ಲಿ ತೊಡಗಿದ್ದ. ಡೆನಿಂ ಹಾಟ್ ಪ್ಯಾಂಟ್ಸ್ ಹಾಕಿದ್ದ ಯುವತಿಯ ಹಿಂಬದಿಯನ್ನು ಮೈಕಲ್ ಸ್ಪರ್ಶಿಸುವುದು ಅಪ್ಪಿಹಿಡಿಯುವುದು ವೀಡಿಯೊದಲ್ಲಿ ಕಂಡು ಬಂದಾಗ ಸ್ಟೆಫನಿ ಕಂಗಾಲು ಆಗಿದ್ದಳು.ನಂತರ ಆತ ಆ ಮಹಿಳೆಗೆ ತನ್ನ ಫೊನ್ ನಂಬರ್ ನೀಡಿ ತಾನು ಸಿಂಗಲ್ ಆಗಿದ್ದೇನೆ ಎಂದು ಹೇಳುತ್ತಾನೆ. ಮೈಕಲ್‌ನನ್ನು ಲಿಸಾ ಹೊಗಳಿದಾಗಲೇ ಆತ ಆಕೆಯ ಮಾಯಾಜಾಲಕ್ಕೆ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಲೀಸಾ ಆಗ ತನ್ನನ್ನು ಭೇಟಿಯಾಗುವಂತೆ ಮೈಕಲ್‌ಗೆ ಹೇಳಿದ್ದಳು.

  ಸ್ಟೆಫನಿಯನ್ನು ಹೆಚ್ಚು ಕಂಗಾಲು ಮಾಡಿದ್ದ ಪ್ರಿಯತಮ ಮೈಕಲ್‌ನ ವರ್ತನೆಯೆಂದರೆ.ನೀನು ಒಂಟಿಯಾಗಿದ್ದೀಯಾ ಎಂದು ಲಿಸಾ ಕೇಳಿದಾಗ ತಾನು ಹಲವು ಯುವತಿಯರೊಂದಿಗೆ ಪ್ರಣಯ ನಿವೇದನೆ ಮಾಡಿದ್ದೇನೆ ಎಂದು ಆತ ಹೇಳಿದ್ದಾಗಿತ್ತು.ಯುಟ್ಯೂಬ್‌ ನ 'ಟು ಕ್ಯಾಚ್ ಎ ಚೀಟರ್' ಎಂಬ ಸಂಸ್ಥೆಯ ತನ್ನ ಗೆಳೆಯನ ಕುರಿತ ವೀಡಿಯೊವನ್ನು ನೋಡಿದಾಗ ಸ್ಟೆಫನಿಗೆ ತಾನು ಏನನ್ನು ನೋಡುತ್ತಿದ್ದೇನೆ ಎಂದು ಕೂಡಾ ನಂಬದ ಸ್ಥಿತಿಯಲ್ಲಿದ್ದಳು ಎಂದು ವರದಿ ತಿಳಿಸಿದೆ. ಈ ವೀಡಿಯೊ ನೋಡಿ ತನ್ನ ಗೆಳೆಯನ ವಂಚನೆ ಅರಿವಾದ ಮೇಲೆ ಆತನನ್ನು ಇನ್ನೆಂದೂ ಭೇಟಿಯಾಗಲಾರೆ ಎಂದು ಸ್ಟೆಫನಿ ನಿರ್ಧರಿಸಿಬಿಟ್ಟಿದ್ದಾಳೆ ಎಂದು ವರದಿ ವಿವರಿಸಿದೆ.

  ಅವಳ ಗೆಳೆಯನ ವಂಚನೆಯ ಈ ವೀಡಿಯೊವನ್ನುಯುಟ್ಯೂಬ್‌ನಲ್ಲಿ ಅರುವತ್ತು ಸಾವಿರ ಮಂದಿ ಈವರೆಗೆ ನೋಡಿದ್ದಾರೆ. ಇವರಲ್ಲಿ ಕೆಲವರು ಮೈಕಲ್‌ನ ಬಗ್ಗೆ ಸಹತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ಓರ್ವ ಮಹಿಳೆ ಹೀಗೆ ಚಂಚಲವಾಗಿ ವರ್ತಿಸಿದರೆ ಆಮಹಿಳೆಯ ಬಲೆಯಿಂದ ಅಷ್ಟು ಸುಲಭದಲ್ಲಿ ಹೊರಬರಲು ಯಾರಿಂದಲೂ ಸಾಧ್ಯವಾಗದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News