ಕುಂಜತ್ತೂರು: ಕಂಗಾಲಾದ ಬಡಕುಟುಂಬಕ್ಕೆ ಬೇಕಿದೆ ಸಹೃದಯರ ನೆರವಿನ ಹಸ್ತ

Update: 2016-07-29 13:25 GMT

ಕುಂಜತ್ತೂರು,ಜು.29: ಹಲವಾರು ವರ್ಷಗಳಿಂದ ಅಸ್ತಮಾ ರೋಗದಿಂದ ಹಾಸಿಗೆಯನ್ನು ಹಿಡಿದ ಗಂಡ.. ಜೊತೆಗೆ ಪತ್ನಿಗೂ ಬಾಧಿಸುತ್ತಿರುವ ಕ್ಯಾನ್ಸರ್ ರೋಗ.. ಆಸ್ಪತ್ರೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಪರದಾಡುತ್ತಿರುವ ಕುಟುಂಬ..ಉದ್ಯಾವರ ಸಾವಿರ ಜುಮಾ ಮಸೀದಿ ರಸ್ತೆಯಲ್ಲಿರುವ ಅಬ್ದುಲ್ ರಹ್ಮಾನ್-ಖದೀಜ ದಂಪತಿಯ ಕುಟುಂಬದ ದುರವಸ್ಥೆ.

ಮದುವೆಯಾಗಿ 35 ವರ್ಷಗಳೇ ಕಳೆದರೂ ಈ ದಂಪತಿಗಳಿಗೆ ಮಕ್ಕಳ ಭಾಗ್ಯವಿಲ್ಲ. ಆಡುಗಳನ್ನು ಸಾಕಿ ಅದರಿಂದ ಸಿಗುವ ಹಾಲನ್ನು ಮಾರಾಟ ಮಾಡಿ ಇದೀಗ ಇವರ ಜೀವನ ಸಾಗುತ್ತಿದೆ. ಅಬ್ದುಲ್ ರಹ್ಮಾನ್ ಅಸ್ತಮಾ ರೋಗದಿಂದ ಹಾಸಿಗೆಯನ್ನು ಹಿಡಿದಿದ್ದರೆ, ಅವರ ಪತ್ನಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿ ಶಸ್ತ್ರ ಕ್ರಿಯೆಯ ಬಳಿಕ ಅವರ ಎಡ ಕೈ ಸಂಪೂರ್ಣವಾಗಿ ಬಾತು ಹೋಗಿದ್ದು, ಯಾವುದೇ ಕೆಲಸವನ್ನು ಕೂಡಾ ನಿರ್ವಹಿಸಲು ಅಸಾಧ್ಯವಾದ ಪರಿಸ್ಥಿತಿ ಬಂದೊಗಿದೆ. ಅಬ್ದುಲ್ ರಹ್ಮಾನ್‌ರ ತಂಗಿಯ ಪುತ್ರನ ದಿನಗೂಲಿ ಯಿಂದ ಸಿಗುವ ವೇತನದಿಂದ ಈ ಕುಟುಂಬದ ಜೀವನ ಸಾಗಬೇಕಾಗಿದೆ.

ದಂಪತಿಯ ಮದ್ದಿನ ಖರ್ಚಿಗೆ ಸುಮಾರು 10 ಸಾವಿರ ರೂ. ಗಿಂತಲೂ ಅಧಿಕ ಮೊತ್ತ ಪ್ರತಿ ತಿಂಗಳು ಬೇಕಾಗಿದೆ ಎನ್ನುತ್ತಾರೆ ರೋಗ ಪೀಡಿತರಾದ ಅಬ್ದುಲ್ ರಹ್ಮಾನ್. ಕಳೆದ 20 ವರ್ಷಗಳಿಂದ ಅಸ್ತಮಾ ರೋಗ ತುತ್ತಾದ ಪತಿ ಒಂದೆಡೆಯಾದರೆ, ಇತ್ತ ಪತ್ನಿಗೆ 10 ವರ್ಷಕ್ಕೆ ಮೊದಲು ಕ್ಯಾನ್ಸರ್ ಬಾಧಿಸಿ ಆರೋಗ್ಯ ಹದಗೆಟ್ಟಿದೆ. ಪತಿ ಪತ್ನಿಯರ ಆರೋಗ್ಯ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದು, ಯಾವುದೇ ನೆರವು ಸಿಗದೇ ಕುಟುಂಬ ಇದೀಗ ಕಂಗಾಲಾಗಿದೆ.

ಸಂಕಷ್ಟದಲ್ಲಿರುವ ಈ ದಂಪತಿಗಳಿಗೆ ಸಹಾಯ ಹಸ್ತದ ಅವಶ್ಯಕತೆಯಿದೆ. ಆರ್ಥಿಕ ನೆರವು ನೀಡುವವರು ಅಬ್ದುಲ್ ರಹ್ಮಾನ್ ಸಿಂಡಿಕೇಟ್ ಬ್ಯಾಂಕ್ ಮಂಜೇಶ್ವರ ಹೊಸಂಗಡಿ ಶಾಖೆಯ ಖಾತೆ ಸಂಖ್ಯೆ 42122200034415ಗೆ ಜಮೆ ಮಾಡಬಹುದು. ಅಥವಾ ದೂ.ಸಂ.09567106727ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News