ಹೊಸ ದರದಲ್ಲಿ ರಸಗೊಬ್ಬರ ಮಾರಾಟ ಖಚಿತಪಡಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2016-07-29 14:54 GMT

ಹೊಸದಿಲ್ಲಿ, ಜು.29: ಕೆಲವು ಸ್ಥಳಗಳಲ್ಲಿ ಯೂರಿಯಾ ಹೊರತಾದ ರಸಗೊಬ್ಬರಗಳು ರಿಯಾಯ್ತಿ ಬೆಲೆಗೆ ದೊರೆಯತ್ತಿಲ್ಲವೆಂಬ ರೈತರ ದೂರುಗಳ ನಡುವೆಯೇ, ವ್ಯಾಪಾರಿಗಳು ರಸರೊಬ್ಬರಗಳನ್ನು ಹೊಸ ದರದಲ್ಲಿಯೇ ಮಾರಾಟ ಮಾಡುವುದನ್ನು ಖಚಿತಪಡಿಸಲು ರಸರೊಬ್ಬರ ಮಾರಾಟಗಾರರ ‘ಶೋಧ ಹಾಗೂ ವಶೀಕರಣ’ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.
ಜು.5ರಂದು ಕೇಂದ್ರ ಸರಕಾರವು ಡೈ ಅಮೋನಿಯಾ ಸಲ್ಫೇಟ್‌ಗೆ(ಡಿಎಪಿ) ಟನ್‌ಗೆ ರೂ. 2,500 ಕಡಿತ(ಹೊಸ ಬೆಲೆ ಟನ್‌ಗೆ 22 ಸಾವಿರ ರೂ.), ಮ್ಯೂರಿಯೇಟ್ ಆಫ್ ಪೊಟ್ಯಾಶ್‌ಗೆ ರೂ. 5 ಸಾವಿರ ಕಡಿತ(ಹೊಸಬೆಲೆ ಟನ್‌ಗೆ ರೂ.11 ಸಾವಿರ) ಹಾಗೂ ಎನ್‌ಪಿಕೆ ಗೊಬ್ಬರಕ್ಕೆ ರೂ. 1 ಸಾವಿರ ಕಡಿತವನ್ನು ಘೋಷಿಸಿತ್ತು.
ತಾವು ಡಿಎಪಿ, ಎಂಒಪಿ ಹಾಗೂ ಎನ್‌ಪಿಕೆ ರಸರೊಬ್ಬರಗಳ ಬೆಲೆಗಳನ್ನು ಇಳಿಸಿದ್ದೇವೆ. ಅಗತ್ಯ ವಸ್ತು ಕಾಯ್ದೆಯನ್ನು ಜಾರಿಗೊಳಿಸುವುದು ರಾಜ್ಯ ಸರಕಾರಗಳ ಹೊಣೆಯಾಗಿದೆ. ಕಾಯ್ದೆ ಜಾರಿ ಮಾಡುವಂತೆ ತಾನು ರಾಜ್ಯಗಳಿಗೆ ಪತ್ರ ಬರೆದಿದ್ದೇನೆ. ರಸಗೊಬ್ಬರ ವ್ಯಾಪಾರಿಗಳು ಹೊಸ ಬೆಲೆಗಳನ್ನು ಪಾಲಿಸುವಂತೆ ರಾಜ್ಯಗಳು ಶೋಧ ಹಾಗೂ ವಶೀಕರಣ ಕ್ರಮವನ್ನು ಕೈಗೊಳ್ಳಬೇಕೆಂದು ರಸಗೊಬ್ಬರ ಸಚಿವ ಅನಂತಕುಮಾರ್ ಪ್ರಶ್ನಾವಧಿಯ ವೇಳೆ ರಾಜ್ಯಸಭೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News