×
Ad

ಕಾರ್ಕಳ: ಮನೆಗೆ ನುಗ್ಗಿ ಸೊತ್ತು ಕಳವು

Update: 2016-07-29 21:37 IST

ಕಾರ್ಕಳ, ಜು.29: ಕಾರ್ಕಳ ಚತುರ್ಮುಖ ಬಸದಿ ಬಳಿ ದಾನಶಾಲೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ವರದಿಯಾಗಿದೆ.

ಈ ಕಳವು ಪ್ರಕರಣವು ಜು.19ರಿಂದ 28ರ ಮಧ್ಯಾವಧಿಯಲ್ಲಿ ನಡೆದಿದೆ. ಕೆ.ಸುಬ್ರಹ್ಮಣ್ಯ ತಂತ್ರಿ ಎಂಬವರ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ವಿಗ್ರಹ, ಬೆಳ್ಳಿಯ 2 ಕನಕ ಪುಷ್ಪಮಾಲೆ, ಬೆಳ್ಳಿಯ ಗಟ್ಟಿ, 2 ಬೆಳ್ಳಿಯ ತಂಬಿಗೆ, ಬೆಳ್ಳಿಯ ಆರತಿ, ಬೆಳ್ಳಿಯ ಏಕಆರತಿ, ಬೆಳ್ಳಿಯ ಸಲಾಕೆ ಆರತಿ, ಬೆಳ್ಳಿಯ ಹರಿವಾಣ, 12 ಬೆಳ್ಳಿಯ ನಾಣ್ಯ ಹಾಗೂ 1500ರೂ. ಕಳವು ಮಾಡಿದ್ದಾರೆ.

ಇವುಗಳ ಒಟ್ಟು ಮೌಲ್ಯ 51500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News