ಅನಿಲಕಟ್ಟೆಯಲ್ಲಿ ಮಡವೂರು ಸಿ.ಎಂ.ಯತೀಂಖಾನಾ ಅಸ್ತಿತ್ವಕ್ಕೆ
ವಿಟ್ಲ, ಜು.29: ಮಡವೂರು ಸಿ.ಎಂ. ಮಖಾಂ ಶರೀಫ್‌ನ ಅಂಗಸಂಸ್ಥೆಯಾಗಿ ವಿಟ್ಲ ಸಮೀಪದ ಅನಿಲಕಟ್ಟೆಯಲ್ಲಿ ಮಡವೂರು ಸಿ.ಎಂ.ಯತೀಂಖಾನಾ ಸ್ಥಾಪನೆ ಕುರಿತು ಅನಿಲಕಟ್ಟೆ ಹಯಾತುಲ್ ಇಸ್ಲಾಮ್ ಮದ್ರಸದಲ್ಲಿ ಬುಧವಾರ ಸಭೆ ನಡೆಯಿತು.
ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಡವೂರು ಮಖಾಂನ ಪ್ರತಿನಿಧಿಗಳಾದ ಟಿ.ಪಿ.ಇ.ಮುಹಮ್ಮದ್ ಕೋಯ ಫೈಝಿ, ಪ್ರಧಾನ ಕಾರ್ಯದರ್ಶಿ ಹಾಜಿ ಶರಫುದ್ದೀನ್ ಮಾಸ್ಟರ್, ಮುತ್ತಾಡ್ ಅಬ್ದುರ್ರಹ್ಮಾನ್ ಮಾಸ್ಟರ್, ಕತರ್ ಅಬೂಬಕರ್ ವೌಲವಿ, ಎಸ್.ಯು.ಫೈಝಲ್ ಫೈಝಿ, ಕೆ.ಎಂ.ಮುಹಮ್ಮದ್ ಮಾಸ್ಟರ್, ಕೆ.ಪಿ.ಮಾಮು ಹಾಜಿ ಮಡವೂರು, ಎ.ಪಿ.ನಾಸರ್ ಮಾಸ್ಟರ್, ಖಾಸಿಂ ದಾರಿಮಿ ಕಿನ್ಯ ಸಭೆಯ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಅನಿಲಕಟ್ಟೆ ಸಿ.ಎಂ.ಮಡವೂರು ಯತೀಂ ಖಾನ ಸಮಿತಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸೈಯದ್ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್, ಉಪಾಧ್ಯಕ್ಷರಾಗಿ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಮತ್ತು ಅಮೀರ್ ತಂಙಳ್ ಕಿನ್ಯ, ಕಾರ್ಯಾಧ್ಯಕ್ಷರಾಗಿ ಪಿ.ಎ.ಮುಹಮ್ಮದ್ ಮುಸ್ಲಿಯಾರ್, ಸಂಚಾಲಕರಾಗಿ ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್, ಜತೆ ಸಂಚಾಲಕರಾಗಿ ಕೆ.ಎ.ಹಸೈನಾರ್ ಮುಸ್ಲಿಯಾರ್, ಜಮಾಲುದ್ದೀನ್, ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಸಮೀರ್ ಪಳಿಕೆ, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ಲಾ ಹಾಜಿ ಕಡಂಬು, ಕೋಶಾಧಿಕಾರಿಯಾಗಿ ಶರೀಫ್ ಮೂಸಾ ಕುದ್ದುಪದವು, ಮಾಧ್ಯಮ ಪ್ರತಿನಿಧಿಯಾಗಿ ಎ.ಹನೀಫ್ ಅನಿಲಕಟ್ಟೆ ಹಾಗೂ ಇಪ್ಪತ್ತೊಂದು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ, 111 ಮಂದಿಯನ್ನು ಸಮಿತಿ ಸದಸ್ಯರಾಗಿ ಆರಿಸಲಾಯಿತು.