×
Ad

ಉಪ್ಪಳ: ನಿರ್ಮಾಣ ಹಂತದ ಮನೆ ಕುಸಿತ

Update: 2016-07-29 23:55 IST

ಮಂಜೇಶ್ವರ, ಜು.29: ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದ ಘಟನೆ ಉಪ್ಪಳ ಸಮೀಪದ ನಯಾಬಜಾರ್ ಪರಿ ಸರದಲ್ಲಿ ನಡೆದಿದೆ.
 ನಯಾಬಜಾರ್ ಸಮೀಪದ ಅಜ್‌ಮಲಂಗ್ ರಸ್ತೆಯ ಮಜೀದ್ ಎಂಬವರ ನಿರ್ಮಾಣ ಹಂತದಲ್ಲಿದ್ದ ಕಾಂಕ್ರಿಟ್ ಮನೆ ಬುಧವಾರ ರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ. ಆದರೆ ಯಾವುದೇ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಉಪ್ಪಳ ಗ್ರಾಮಾಧಿಕಾರಿಗಳು ಭೆೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಶಯಕ್ಕೆ ಕಾರಣ: ಇತ್ತೀಚೆಗೆ ಜಿಲ್ಲೆಯಾದ್ಯಂತ ಹಲವು ನಿರ್ಮಾಣಗಳು ಏಕಾಏಕಿ ಕುಸಿದು ಬೀಳುತ್ತಿದ್ದು ಕಾಮಗಾರಿಯ ವೇಳೆ ನಡೆಸುವ ಕ್ಯೂರಿಂಗ್ ಸಮರ್ಪಕವಾಗಿಲ್ಲದ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಕಾಮಗಾರಿ ಗುತ್ತಿಗೆ ಪಡೆಯುವವರು ಕಾರ್ಮಿಕರೊಂದಿಗೆ ಸೇರಿ ಮೋಸ ನಡೆಸುತ್ತಿದ್ದಾರೆಂಬ ಬಗ್ಗೆ ಶಂಕೆ ಏರ್ಪಟ್ಟಿದೆ. ವಿದ್ಯುತ್ ಇಲಾಖೆಯ ವಿದ್ಯುತ್ ಕಂಬಗಳ ನಿರ್ಮಾಣವನ್ನು ಕಳೆದ ಹಲವು ವರ್ಷಗಳಿಂದ ಮಂಜೇಶ್ವರದ ಕಂಪೆನಿಯೊಂದಕ್ಕೆ ನೀಡಲಾಗಿದ್ದು, ಆ ಕಂಪೆನಿ ಪೂರೈಸುವ ವಿದ್ಯುತ್ ಕಂಬಗಳು ಪ್ರತಿವರ್ಷವೂ ಮುರಿದು ಬಿದ್ದು ಕೋಟ್ಯಂತರ ರೂ.ಗಳ ನಷ್ಟಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News