ಕಾಸರಗೋಡು: ಕಳವು ಪ್ರಕರಣದ ಇಬ್ಬರು ಆರೋಪಿಗಳ ಸೆರೆ

Update: 2016-07-30 03:56 GMT

ಕಾಸರಗೋಡು, ಜು.30: ಮನೆಗಳಿಗೆ ನುಗ್ಗಿ ಕಳವು ನಡೆಸುತ್ತಿದ್ದ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಯಿಲಾಂಡಿಯ ಕೆ.ಎಂ. ಫಿರೋಝ್(32) ಮತ್ತು ವಡಗರದ ಅಲ್ತಾಫ್ (33) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಜುಲೈ 17 ರಂದು ನಾಯಮ್ಮಾರಮೂಲೆಯ ಗಲ್ಫ್ ಉದ್ಯೋಗಿ ಅಬ್ದುರ್ರಝಾಕ್ ಎಂಬವರ ಮನೆಯಿಂದ ಮೂರು ಪವನ್ ಚಿನ್ನಾಭರಣ ಮತ್ತು ನಾಲ್ಕು ಸಾವಿರ ರೂ. ಕಳವುಗೈದಿದ್ದರು. ಪೊಯಿನಾಚಿಯ ಚರ್ಚ್‌ನಿಂದ ಐದು ಸಾವಿರ ರೂ., ಬೆಂಡಿಚ್ಚಾಲ್ನ ಮುಹಮ್ಮದ್ ಕುಂಞಿ ಎಂಬವರ ಮನೆಯಿಂದ 8 ಸಾವಿರ ರೂ.ನ್ನು ಕಳವುಗೈದಿದ್ದರು. ಮರುದಿನ ಡಾ.ಸಯ್ಯದ್ ಮುಹಮ್ಮದ್ ಎಂಬವರ ಮನೆಯಿಂದ ನಗದು ಕಳವು ಮಾಡಲಾಗಿತ್ತು.

ಬಂಧಿತ ಇಬ್ಬರು ಸೇರದಿಂತೆ ಆರು ಮಂದಿ ತಂಡದಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಾಸರಗೋಡು , ಕಣ್ಣೂರು , ವಯನಾಡು ಜಿಲ್ಲೆ ಕೇಂದ್ರೀಕರಿಸಿ ತಂಡವು ಕೃತ್ಯ ನಡೆಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News