ಮಹಾದಾಯಿ ತೀರ್ಪು ವಿರೋಧಿಸಿ ಕರವೇ ವತಿಯಿಂದ ಮಂಗಳೂರಿನಲ್ಲಿ ಧರಣಿ

Update: 2016-07-30 07:22 GMT

ಮಂಗಳೂರು, ಜು.30; ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ದ.ಕ ಜಿಲ್ಲಾ ಘಟಕದಿಂದ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.

ಮಹಾದಾಯಿ ತೀರ್ಪು ಖಂಡಿಸಿ ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಧರಣಿ ಸಭೆಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಈ ವಿಚಾರವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರಧಾನಿ ಯವರು ಕರ್ನಾಟಕ, ಗೋವಾ, ಮಹಾರಾಷ್ಟ್ರ ಆಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಧರಣಿಯ ನೇತೃತ್ವವನ್ನು ಕರವೆ ಮುಖಂಡರುಗಳಾದ ನಝೀರ್ ಬೆಂಗ್ರೆ, ರಾಜೇಶ್, ಜಯರಾಜ್ ಜೆಪ್ಪಿನಮೊಗರು, ಮೋಹ್ಸಿರ್ ಅಹ್ಮದ್, ನಝೀರ್ ಮೊಯ್ದಿನ್, ಲತಾ ಕೋಟ್ಯಾನ್, ವಿನುತಾ, ಅರುಣ್ ಕುಮಾರ್, ಬಿ.ಎಸ್ ಇಸ್ಮಾಯೀಲ್, ಖಾದರ್ ತಲಪಾಡಿ ಮೊದಲಾದವರು ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News