×
Ad

ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ : ಕಳವಳ ವ್ಯಕ್ತಪಡಿಸಿದ ಅಮೆರಿಕ

Update: 2016-07-30 12:23 IST

ವಾಷಿಂಗ್ಟನ್, ಜು.30: ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ಹಿಂಸೆಯ ಬಗ್ಗೆ ಅಮೆರಿಕ ಸರಕಾರ ಕಳವಳ ವ್ಯಕ್ತಪಡಿಸಿದ್ದು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ನಾಗರಿಕರನ್ನು ರಕ್ಷಿಸಿ ಇಂತಹ ಘಟನೆಗಳ ಕಾರಣೀಕರ್ತರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

ಗುಜರಾತ್ ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ಎತ್ತಿನ ಮಾಂಸ ಹೊಂದಿದ್ದರೆಂಬ ಕಾರಣಕ್ಕೆ ಇಬ್ಬರು ಮುಸ್ಲಿಮ್ ಮಹಿಳೆಯರ ಮೇಲೆ ಮಧ್ಯ ಪ್ರದೇಶದಲ್ಲಿ ನಡೆದ ಹಲ್ಲೆ ಪ್ರಕರಣಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಸ್ಟೇಟ್ ಡಿಪಾರ್ಟ್ ಮೆಂಟ್ ವಕ್ತಾರ ಜಾನ್ ಕಿಬಿ ''ಎಲ್ಲಾ ವಿಧದ ಅಸಹಿಷ್ಣುತೆಯ ವಿರುದ್ಧ ಹೋರಾಡಲು ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನ ಹೋರಾಟದಲ್ಲಿ ನಾವು ಭಾರತದ ಜನರು ಹಾಗೂ ಸರಕಾರದ ಜೊತೆಗಿದ್ದೇವೆ'' ಎಂದು ಹೇಳಿದರು.

ಸಹಿಷ್ಣು ಸಮಾಜ ನಿರ್ಮಿಸುವಲ್ಲಿ ಅಮೆರಿಕ ಸರಕಾರವು ಭಾರತದ ಜನರೊಂದಿಗೆ ಕೈಜೋಡಿಸಲಿದ್ದು ಇಂತಹ ಒಂದು ಸಮಾಜ ಉಭಯ ರಾಷ್ಟ್ರಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ, ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News