ಕರಾಚಿಯ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರೊಬ್ಬರ ನಿಗೂಢ ಸಾವು
Update: 2016-07-30 12:40 IST
ಕರಾಚಿ, ಜು.30: ಪಾಕಿಸ್ತಾನದ ಕರಾಚಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ವೈದ್ಯರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ವೈದ್ಯ ಅನಿಲ್ ಕುಮಾರ‍್ (32) ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನಿಗೂಢವಾಗಿ ಸಾವಿಗೀಡಾದ ವೈದ್ಯ.
ಅನಿಲ್ ಕುಮಾರ‍್ ತೀವ್ರ ನಿಗಾ ಘಟಕದ ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದವರು ಬಹಳ ಹೊತ್ತಿನ ತನಕ ಹೊರ ಬರದೆ ಇದ್ದಾಗ ಆಸ್ಪತ್ರೆಯ ವೈದ್ಯರು ಅವರನ್ನು ಹುಡುಕಿಕೊಂಡು ಹೋದರು. ಶಸ್ತ್ರ ಚಿಕಿತ್ಸಾ ಕೊಠಡಿಯ ಬಾಗಿಲು ಬಂದ್ ಆಗಿತ್ತು. ಬಾಗಿಲು ಮುರಿದು ನೋಡಿದಾಗ ಅನಿಲ್ ಕುಮಾರ್ ಕುರ್ಚಿಯಲ್ಲಿ ಕುಳಿತಲ್ಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ಕೈಯಲ್ಲಿ ಇಂಜೆಕ್ಸೆನ್ ಚುಚ್ಚಿದ ಗುರುತು ಪತ್ತೆಯಾಗಿದ್ದು, ಇಂಜೆಕ್ಷನ್ ಮೂಲಕ ದೇಹದೊಳಕ್ಕೆ ವಿಷ ವಸ್ತವನ್ನು ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.