ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ
Update: 2016-07-30 22:14 IST
ಮಂಗಳೂರು, ಜು.30:ರಾಜ್ಯದಲ್ಲಿ ಮಹಾದಾಯಿ ನ್ಯಾಯಾಧಿರಣದ ತೀರ್ಪುನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಹೊರತು ಪಡಿಸಿದಂತೆ ಇತರ ಸಂಘಟನೆಗಳಿಂದ ಹೆಚ್ಚಿನ ಬೆಂಬಲ ದೊರೆಯದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ ಎಲ್ಲಾ ನಗರ ,ಗ್ರಾಮಾಂತರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದ್ದವು.
ಕೆಎಸ್ಸಾರ್ಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡ ಕಾರಣ ಕೆಲವು ಬಸ್ಸುಗಳು ರಸ್ತೆಗಿಳಿಯದೆ ಗ್ರಾಮಾಂತರ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.ಶಾಲಾಮಕ್ಕಳು ಖಾಸಗಿ ವಾಹನದಲ್ಲಿ ಕಷ್ಟಪಟ್ಟು ಸಂಚರಿಸುವಂತಾಯಿತು.