ಬೆಳ್ತಂಗಡಿ: ಸಮಾಜ ಕಲ್ಯಾಣಾಧಿಕಾರಿಗಳಿಂದ ದಲಿತ ಕಾಲನಿಗಳ ಸಮಸ್ಯೆ ಪರಿಶೀಲನೆ
Update: 2016-07-30 23:43 IST
ಬೆಳ್ತಂಗಡಿ, ಜು.30: ಲಾಯ್ಲ ಗ್ರಾಮದ ದಲಿತರ ಕಾಲನಿಗಳ ಸಮಸ್ಯೆಗಳ ಪರಿಶೀಲಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯವರು ಇಂದು ಲಾಯ್ಲ ಗ್ರಾಮದ ದಲಿತರ ಕಾಲನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಬೇಡ್ಕರ್ ನಗರದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ವಿದ್ಯುತ್ ಲೈನ್ ಅನ್ನು ಕೂಡಲೇ ಸರಿಪಡಿಸುವಂತೆ ಅವರು ಸೂಚಿಸಿದರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ದಲಿತ ಕಾಲನಿಗಳ ರಸ್ತೆಗಳ ಸಮಸ್ಯೆಗಳ ಬಗ್ಗೆ ಅಂಬೇಡ್ಕರ್ ನಿಗಮದಿಂದ ಮಂಜೂರಾಗಿರುವ ಮನೆಗೆ ಇನ್ನೂ ಅನುದಾನ ಸಿಗದಿರುವ ಬಗ್ಗೆ ಹಾಗೂ ಇತರ ವಿಚಾರಗಳ ಬಗ್ಗೆ ಸ್ಥಳೀಯ ನಿವಾಸಿ ದಲಿತ ಮುಖಂಡ ನಾಗರಾಜ ಎಸ್. ಲಾಯ್ಲ ಮತ್ತಿತರರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಗ್ರಾ. ಪಂ ಅಭಿವೃದ್ದಿ ಅಧಿಕಾರಿಯವರಿಗೆ ಸೂಚಿಸಲಾಯಿತು.