ವಿವಿ ಕಾಲೇಜಿನಲ್ಲಿ ಕೊಂಕಣಿ ಎಂ.ಎ.ಗೆ ಅವಕಾಶ
Update: 2016-07-30 23:47 IST
ಮಂಗಳೂರು, ಜು.30: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಹಂಪನಕಟ್ಟೆಯ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಕೊಂಕಣಿ ಕಲಿಕೆ ಆರಂಭವಾಗಲಿದೆ. ಇದು ಹೊಸ ಕೋರ್ಸ್ ಆಗಿರುವುದರಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರಿಗೆ, ಕೊಂಕಣಿ ಬಗ್ಗೆ ಆಸಕ್ತಿ ಇರುವವರಿಗೆ ಅವಕಾಶ ಇದೆ. ಕೊಂಕಣಿ ಅಕಾಡಮಿ, ವಿಶ್ವ ಕೊಂಕಣಿ ಕೇಂದ್ರ, ಮಾಂಡ್ ಸೊಭಾಣ್, ಕೊಂಕಣಿ ಪ್ರಚಾರ ಸಂಚಾಲನ ಮತ್ತಿತರ ಕೊಂಕಣಿ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ ಸೌಲಭ್ಯವು ಸಿಗಲಿದೆ. ಆಸಕ್ತರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಕಚೇರಿ ದೂ.ಸಂ. 0824-2424608, ಮೊ: 9449284031 (ಡಾ.ಜಯವಂತ ನಾಯಕ್), 9845209374 (ವಿಕ್ಟರ್ ಮಥಾಯಸ್) ಇಮೇಲ್ uecm2015@gmail.com ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.