×
Ad

ಜ್ವರದಿಂದ ಮೃತ್ಯು

Update: 2016-07-30 23:54 IST

ಮಂಜೇಶ್ವರ, ಜು.30: ಮೀಯಪದವು ಬಳಿಯ ಕೋಡಿಯಡ್ಕ ನಿವಾಸಿ ಬಸ್ ಟೈಮ್ ಕೀಪರ್ ಜ್ವರದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟವರನ್ನು ಶಶಿ ಕೋಡಿಯಡ್ಕ(40) ಎಂದು ಗುರುತಿಸಲಾಗಿದೆ. ವಾರಗಳ ಹಿಂದೆ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ. ಬಸ್ ನಿರ್ವಾಹಕರಾಗಿದ್ದ ಇವರು ಇತ್ತೀಚೆಗೆ ಟೈಮ್‌ಕೀಪರ್ ಆಗಿ ದುಡಿಯುತ್ತಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News