×
Ad

ಮಾನಸಿಕ ಅಸ್ವಸ್ಥ ನಾಪತ್ತೆ

Update: 2016-07-30 23:58 IST

ವಿಟ್ಲ, ಜು.30: ಮಾನಸಿಕ ವ್ಯಕ್ತಿಯೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಜಿಪಮೂಡ ಗ್ರಾಮದ ಮಿತ್ತಮಜಲು ಸಮೀಪದ ಕುಕ್ಕುದಕಟ್ಟೆ ನಿವಾಸಿ ಮಾಲತಿ ಎಂಬವರ ಪುತ್ರ ಸಚಿನ್(38) ನಾಪತ್ತೆಯಾದವರು.
ಸಚಿನ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿದಿನ ಬೆಳಗ್ಗೆ ಮನೆಯಿಂದ ಮೆಲ್ಕಾರ್‌ವರೆಗೆ ನಡೆದುಕೊಂಡು ಹೋಗಿ ಮತ್ತೆ ವಾಪಸು ಮನೆಗೆ ಬರುತ್ತಿದ್ದರು. ಮಂಗಳವಾರ ಎಂದಿನಂತೆ ಸಚಿನ್ ಮನೆಯಿಂದ ಬೆಳಗ್ಗೆ ಹೊರಟು ಹೋದವರು ಇದುವರೆಗೆ ಮನೆಗೆ ವಾಪಾಸು ಬರದೆ ಕಾಣೆಯಾಗಿರುತ್ತಾರೆೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News