×
Ad

ದಬಕ್ ದಬಾ ಐಸಾ ತುಳುಚಿತ್ರದ ಆನ್‌ಲೈನ್ ಬುಕಿಂಗ್ ಆ.1ರಿಂದ ಆರಂಭ

Update: 2016-07-31 20:01 IST

ಮಂಗಳೂರು,ಜು.31 :ಆ.5ರಂದು ಉಭಯ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿರುವ ದಬಕ್ ದಬಾ ಐಸಾ ತುಳು ಚಲನಚಿತ್ರವನ್ನು ಆ.1ರಿಂದ ಆನ್‌ಲೈನ್‌ನಲ್ಲೇ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

 ಚಿತ್ರ ರಸಿಕರು ಮಲ್ಟಿಫ್ಲೆಕ್ಸ್‌ಗಳಲ್ಲಿ ತಮ್ಮ ಟಿಕೆಟನ್ನು ಕಾಯ್ದಿರಿಸಿಕೊಳ್ಳಬಹುದು.

 ಚಿತ್ರ ಬಿಡುಗಡೆಗೆ ಇರುವ ಐದು ದಿವಸಗಳ ಮುನ್ನವೇ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಕಲ್ಪಿಸಿರುವುದು ತುಳುಚಿತ್ರ ಇತಿಹಾಸದಲ್ಲೇ ಪ್ರಥಮವಾಗಿದೆ. ಚಿತ್ರದ ಮೇಲೆ ಜನರು ಇಟ್ಟಿರುವ ಅತಿ ನಿರೀಕ್ಷೆಯನ್ನು ಮನಗಂಡ ಚಿತ್ರಮಂದಿರಗಳು ಈ ರೀತಿ ಆನ್‌ಲೈನ್ ಬುಕಿಂಗ್‌ಗೆ ವ್ಯವಸ್ಥೆ ಮಾಡಿದೆ.

 ಚಿತ್ರ ರಸಿಕರು ತಮ್ಮ ನೆಚ್ಚಿನ ಸಿನಿಮಾ ಮಂದಿರಗಳಲ್ಲಿ ಚಿತ್ರದ ಟಿಕೆಟನ್ನು ಆನ್‌ಲೈನ್‌ನಲ್ಲೇ ಬುಕಿಂಗ್ ಮಾಡಿಕೊಂಡು ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಬಹುದು. ಅಲ್ಲದೆ ತುಳು ಭಾಷೆ ಬಾರದವರಿಗಾಗಿ ಇಂಗ್ಲಿಷ್‌ನಲ್ಲಿ ಸಬ್‌ಟೈಟಲ್ ವ್ಯವಸ್ಥೆಯನ್ನೂ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News