×
Ad

ಉಜಿರೆಯ ಶ್ರೀ.ಧ.ಮಂ.ಸ್ವಾಯತ್ತ ಕಾಲೇಜಿನಲ್ಲಿ 'ಬ್ರೆಕ್ಸಿಟ್ ನ ಸಾಧಕ ಭಾದಕಗಳು' ಎಂಬ ಗುಂಪು ಚರ್ಚೆ

Update: 2016-08-01 17:06 IST

ಉಜಿರೆಯ ಶ್ರೀ.ಧ.ಮಂ.ಸ್ವಾಯತ್ತ ಕಾಲೇಜಿನಲ್ಲಿ 'ಬ್ರೆಕ್ಸಿಟ್ ನ ಸಾಧಕ ಭಾದಕಗಳು' ಎಂಬ ಗುಂಪು ಚರ್ಚೆ ಕಾರ್ಯಕ್ರಮ

 ಬೆಳ್ತಂಗಡಿ,ಆ.1: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕು (ಬ್ರೆಕ್ಸಿಟ್) ಎಂದು ಅಲ್ಲಿನ ಜನರು ತೀರ್ಪು ನೀಡಿದ್ದಾರೆ. ಜಗತ್ತಿನಾದ್ಯಂತ ಆತಂಕ ಮೂಡಿಸಿರುವ ಈ ನಡೆಯ ಸಾಧಕ ಭಾದಕಗಳ ಚರ್ಚೆಗಳು ನಡೆಯುತ್ತಿದೆ. ಜನಮತವೊಂದು ಈ ತರಹದ ಸಂಚಲನ ಮೂಡಿಸಲು ಕಾರಣ ಒಕ್ಕೂಟ ಹೊಂದಿರುವ ಆರ್ಥಿಕ ಶಕ್ತಿ ಹಾಗೂ ಆರ್ಥಿಕ ಚಿಂತನೆಗಳಲ್ಲಿ ದೇಶಗಳ ನಡುವಿನ ಆರ್ಥಿಕ ಸಹಕಾರಗಳ ಮೇಲೆ ಇರುವ ದೃಡವಾದ ನಂಬಿಕೆ ಎಂದು ಶ್ರೀ.ಧ.ಮಂ.ಸ್ವಾಯತ್ತ ಕಾಲೇಜಿನ ಕುಲಸಚಿವರಾದ ಡಾ.ಪಿ.ಎನ್.ಉದಯಚಂದ್ರ ಅವರು ತಿಳಿಸಿದರು.

ಡಾ.ಉದಯಚಂದ್ರ ಅವರು ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ಸಂಘವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ 'ಬ್ರೆಕ್ಸಿಟ್ ನ ಸಾಧಕ ಭಾದಕಗಳು' ಎಂಬ ಗುಂಪು ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರಬೇಕು (ಬ್ರೆಕ್ಸಿಟ್) ಎಂದು ವಿಧ್ಯಾರ್ಥಿಗಳಾದ ಜಿನಪ್ರಸಾದ್, ಸಮನ್ವಿತ,ಯೋಶಿಕಾ ಹಾಗೂ ಒಕ್ಕೂಟದಲ್ಲಿ ಉಳಿಯಬೇಕು (ಬ್ರಿಮೇನ್) ಎಂದು ವಿಧ್ಯಾರ್ಥಿಗಳಾದ ಕೇಯೂರ್ ವರ್ಮ, ಆತ್ಮಿಕಾ ಶೆಟ್ಟಿ, ನಿತಿನ್ ತಮ್ಮ ವಿಷಯನ್ನು ಮಂಡಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ.ಕೆ. ಬಾಲಕೃಷ್ಣ ಅವರು ಮಾತನಾಡುತ್ತಾ ಐರೋಪ್ಯ ಒಕ್ಕೂಟದ ಮುಖ್ಯ ನೀತಿಯಾದ ಉದ್ಯೋಗಿಗಳ ಮುಕ್ತ ಚಲನೆಯಿಂದ ಬ್ರಿಟನ್ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಸ್ಥಳೀಯರ ಉದ್ಯೋಗಕ್ಕೆ ಕಂಟಕವಾಗುತ್ತಿದೆ ಹಾಗೂ ಇದರಿಂದಾಗಿ ಬ್ರಿಟನ್ ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭಾವನೆ ಬ್ರಿಟನ್ ೊರಬರಲು ಕಾರಣ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಮಾತನಾಡುತ್ತಾ ದೇಶದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡದೆ, ನಿರ್ಧಾರಗಳ ದೀರ್ಘಾವಧಿ ಪರಿಣಾಮಗಳ ಬಗ್ಗೆ ಹೆಚ್ಚಿನ ಚಿಂತನೆಗಳು ಅಗತ್ಯ. ಬ್ರೆಕ್ಸಿಟ್ ಗೆ ವಿರುದ್ಧ ನಿಲುವು ಹೊಂದಿರುವ ಜನರು ಮತ್ತೊಮ್ಮೆ ಜನಮತ ನಡೆಸುವಂತೆ ಆಗ್ರಹಿಸಿರುವುದು ಇದಕ್ಕೆ ನಿದರ್ಶನ ಎಂದು ಅಭಿಪ್ರಾಯಪಟ್ಟರು.

ಅರ್ಥಶಾಸ್ತ್ರ ಪ್ರಾಧ್ಯಾಪಕ ಮಹೇಶ್ ಕುಮಾರ್ ಶೆಟ್ಟಿ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಗಣರಾಜ್ ಸ್ವಾಗತಿಸಿ ನಾಗರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News