×
Ad

ಉಜಿರೆ: 'ಆಟಿಡ್ ಕಂಡೊಡೊಂಜಿ ದಿನ' ಕಾರ್ಯಕ್ರಮ

Update: 2016-08-01 17:12 IST

ಬೆಳ್ತಂಗಡಿ,ಆ.1: ನಮ್ಮ ಹಳೆಯದಾದ ಸಂಸ್ಕೃತಿಯನ್ನು ಯುವಕರಿಗೆ, ಮಕ್ಕಳಿಗೆ ಪರಿಚಯಿಸುವ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಆಟಿಯ ತಿಂಗಳಿನಲ್ಲಿ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳು ಆರೋಗ್ಯಕರವಾದುದು ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಪ್ರಗತಿಪರ ಕೃಷಿಕ, ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಅಂಡಿಂಜೆ ಹೇಳಿದ್ದಾರೆ.

ಅವರು ಭಾನುವಾರ ಉಜಿರೆ ಸಮೀಪದ ನಿಡಿಗಲ್‌ಮಜಲ್ ಗದ್ದೆಯಲ್ಲಿ ದಕ ಜಿಲ್ಲಾ ಮಡಿವಾಳರ ಸಂಘ ಕುಡ್ಲ ಹಾಗೂ ಬೆಳ್ತಂಗಡಿ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ 'ಆಟಿಡ್ ಕಂಡೊಡೊಂಜಿ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ಮಾತನಾಡಿ, ಪೇಟೆಯಲ್ಲಿ ಬೆಳೆದಿರುವ ನಮಗೆ ಹಳ್ಳಿಯ ಸಂಸ್ಕೃತಿ, ಆಚಾರ ವಿಚಾರಗಳ ಪರಿಚಯದ ಅರಿವು ಇರುವುದಿಲ್ಲ. ಕಾಂಕ್ರೀಟ್ ಕಾಡಿನ ಪೇಟೆಯ ವಾತಾವರಣದಿಂದ ಮನಸಿಗೆ ಮುದ ನೀಡುವ ಹಳ್ಳಯ ವಾತಾವರಣ ಉತ್ತಮವಾದುದು ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಧರ್ಣಪ್ಪ ಡಿ., ಕರಂಬಾರಿನ ಕೃಷಿಕ ಮಾಯಿಲಪ್ಪ ಸಿರಿಯಾನ್ ಅತಿಥಿಗಳಾಗಿದ್ದರು.

 ಈ ಸಂದರ್ಭದಲ್ಲಿ ಕೃಷಿಕ ಮಾಯಿಲಪ್ಪ ಸಿರಿಯಾನ್ ಅವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಶಶಿಧರ್ ಎಂ. ನಿಡಿಗಲ್ ಸ್ವಾಗತಿಸಿ, ದಕ ಜಿಲ್ಲಾ ಮಡಿವಾಳದ ಸಂಘದ ಕ್ರೀಡಾ ಕಾರ್ಯದರ್ಶಿ ಅಶೋಕ್ ಪೊಳಲಿ ಪ್ರಸ್ತಾಪಿಸಿದರು. ಬೆಳ್ತಂಗಡಿ ತಾಲೂಕು ಮಡಿವಾಳ ಸಂಘದ ಉಪಾಧ್ಯಕ್ಷೆ ಜಾನಕಿ ಟೀಚರ್ ವಂದಿಸಿದರು. ಪತ್ರಕರ್ತ ರಾಜೇಶ್ ಪೆಂರ್ಬುಡ ಮತ್ತು ದೀಕ್ಷಿತಾ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

 ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದಕ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ವಹಿಸಿದ್ದರು. ರಜಕ ಯೂತ್ ಜಿಲ್ಲಾಧ್ಯಕ್ಷ ಸುದರ್ಶನ್ ಕೂಳೂರು, ಎಂಆರ್‌ಪಿಎಲ್‌ನ ನಿವೃತ್ತ ಅಧಿಕಾರಿ ಯತಿರಾಜ್ ಸಾಲಿಯಾನ್, ದುಬೈನ ಉದ್ಯವಿು ಅಜಿತ್ ಕದ್ರಿ ವೇದಿಕೆಯಲ್ಲಿದ್ದರು.ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಕೆಸರುಗದ್ದೆಯನ್ನು ನೀಡಿದ ಕಾಂತಪ್ಪ ಮಡಿವಾಳ ನಿಡಿಗಲ್ ಅವರನ್ನು ಸನ್ಮಾನಿಸಲಾಯಿತು. ನಾನಾ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News