ಭಟ್ಕಳ: ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆಗೆ ಬೆಸ್ಟ್ ಸ್ಕೂಲ್ ರೋಲಿಂಗ್ ಶೀಲ್ಡ್
Update: 2016-08-01 18:41 IST
ಭಟ್ಕಳ,ಆ.1: ಕಳೆದ ಮೂರು ವರ್ಷಗಳಿಂದ ಸತತವಾಗಿ ರಾಬಿತಾ ಸೂಸೈಟಿಯಿಂದ ನೀಡಲ್ಪಡುವ ಉತ್ತಮ ಶಾಲೆ ರೋಲಿಂಗ್ ಶೀಲ್ಡ್ ನ್ನುಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢ ಶಾಲೆ ಪಡೆದುಕೊಂಡಿದೆ.
ಸತತವಾಗಿ ಕಳೆದ ಮೂರು ವರ್ಷಗಳಿಂದಲೂ ಇದೇ ಶಾಲೆ ಉತ್ತಮ ಶಾಲೆ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದು ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸುತ್ತಿದೆ ಎಂದು ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.